ಬೆಂಗಳೂರು : ಈ ಹಿಂದೆಯಷ್ಟೇ ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರ ‘ದಿ ವಿಲನ್’ ಟೀಸರ್ ಬಗ್ಗೆ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕಿತ್ತಾಟ ನಡೆದಿತ್ತು. ಇದೀಗ ಇಂತಹದೊಂದು ಘಟನೆ ಮತ್ತೆ ‘ದಿ ವಿಲನ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದ ವೇಳೆ ನಡೆದಿದೆ.
ಇತ್ತೀಚೆಗಷ್ಟೇ ದಿ ವಿಲನ್ ಸಿನಿಮಾದ ಆಡಿಯೋವನ್ನ ಅದ್ದೂರಿಯಾಗಿ ಲಾಂಚ್ ಮಾಡಲಾಗಿತು. ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವಣ್ಣ ಹಾಗೂ ಸುದೀಪ್ ಅವರನ್ನು ಒಂದೇ ವೇದಿಕೆಯ ಮೇಲೆ ನೋಡಲು ಈ ಕಾರ್ಯಕ್ರಮಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ರು.
ಆದರೆ ಸ್ಟೇಜ್ ಮೇಲೆ ವಿಲನ್ ಸಿನಿಮಾದ ನಾಯಕರು ಮಾತನಾಡುತ್ತ , ಚಿತ್ರದ ಬಗ್ಗೆ ಮಾಹಿತಿಯನ್ನ ನೀಡುತ್ತ , ಡ್ಯಾನ್ಸ್ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ರೆ , ಈ ಕಡೆಯಲ್ಲಿ ಅಭಿಮಾನಿಗಳು ತಾವು ಕುಳಿತಿದ್ದ ಚೇರ್ ಗಳನ್ನು ಹಿಡಿದು ಒಬ್ಬರ ಮೇಲೆ ಒಬ್ಬರು ಪ್ಲಾಸ್ಟಿಕ್ ಚೇರ್ ಗಳನ್ನ ಎಸೆಯುತ್ತಾ ಕಿತ್ತಾಡೋಕೆ ಶುರುಮಾಡಿದ್ದಾರೆ. ಹೀಗೆ ಅಭಿಮಾನಿಗಳು ಕಿತ್ತಾಡಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿನಿಮಾ ರಿಲೀಸ್ ಗೂ ಮೊದಲೇ ನಟರ ಅಭಿಮಾನಿಗಳು ಈ ರೀತಿ ಮಾಡಿದರೆ ಇನ್ನು ಸಿನಿಮಾ ರಿಲೀಸ್ ಆದ ಮೇಲೆ ಮತ್ಯಾವ ರೀತಿಯಲ್ಲಿ ವರ್ತಿಸುತ್ತಾರೋ ಎಂಬ ಭಯ ಇದೀಗ ಹಲವರನ್ನು ಕಾಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ