Publish Date: Mon, 19 Feb 2018 (13:48 IST)
Updated Date: Mon, 19 Feb 2018 (13:51 IST)
ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ಧನ್ ಮಿಶ್ರಾ ಅವರು ತಮ್ಮ ಕ್ಷೇತ್ರದ ಪ್ರಾಥಮಿಕ ಶಾಲೆಯೊಂದರ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾನುವಾರ ವೈರಲ್ ಆಗಿದೆ.
ರೇವಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಅವರಿಗೆ ಈ ವೈರಲ್ ವೀಡಿಯೊ ಕೇಳಿದಾಗ "ಫೆಬ್ರವರಿ 15 ರಂದು ಭುಸುದಿ ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ, ಶೌಚಾಲಯವು ಮರಳು ಮತ್ತು ಮಣ್ಣಿನಿಂದ ಮುಚ್ಚಿಹೋಗಿತ್ತು, ನನ್ನ ಬರಿ ಕೈಯಿಂದ ಮುಚ್ಚಿಹೋಗಿರುವ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದೇನೆ ಎಂದು ಅವರು ಹೇಳಿದರು.
ಅವರು ಇಂತಹ ಕೆಲಸಕ್ಕೆ ಹೊಸಬರೇನಲ್ಲ, "ಇದು ಇತರರಿಗೆ ಕಷ್ಟವಾಗಬಹುದು, ಆದರೆ ಇದು ನನಗೆ ಅಭ್ಯಾಸವಾಗಿದೆ, ನಾನು ಎಲ್ಲಿಯೇ ಹೋದರು ಶೌಚಾಲಯಗಳನ್ನು ಯಾವಾಗಲೂ ಪರಿಶೀಲಿಸುತ್ತೇನೆ" ಎಂದು ಅವರು ಹೇಳಿದರು.
ಪ್ರಾಥಮಿಕ ಶಾಲೆಗಳಲ್ಲಿ ಯಾವುದೇ ಸ್ವಚ್ಚತಾ ಸಿಬ್ಬಂದಿಗಳಿರುವುದಿಲ್ಲ ಹಾಗೂ ಗ್ರಾಮಸ್ಥರಿಗು ಅಂತಹ ಶೌಚಾಲಯಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎನ್ನುವ ಜಾಗೃತಿ ಇಲ್ಲ ಎಂದು ಅವರು ಹೇಳಿದರು.
"ಇದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ, ರೇವಾ ನಗರದಲ್ಲಿ ಹಲವು ಬಾರಿ ಕೈಗವಸುಗಳನ್ನು ಬಳಸದೆಯೇ ಕಸದ ರಾಶಿಯನ್ನು ಸ್ವಚ್ಛಗೊಳಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.