Publish Date: Mon, 19 Feb 2018 (12:39 IST)
Updated Date: Mon, 19 Feb 2018 (12:41 IST)
ರೈತ ನಾಯಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪಾರ್ಥೀವ ಶರೀರವನ್ನು ಸಂರಕ್ಷಣೆ ಮಾಡುವ ಸಲುವಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ.
ಹೃದಯಾಘಾತದಿಂದ ನಿಧನರಾಗಿರುವ ಪುಟ್ಟಣ್ಣಯ್ಯ ಅವರ ಅಂತ್ಯಕ್ರಿಯೆಗೆ ಪುಟ್ಟಣ್ಣಯ್ಯ ಮಕ್ಕಳು ವಿದೇಶದಿಂದ ಆಗಮಿಸುವ ಸಲುವಾಗಿ ಮೃತದೇಹವನ್ನು ಸಂರಕ್ಷಣೆ ಮಾಡಲಾಗುತ್ತಿದೆ.
ಎರಡು ದಿನಗಳ ಬಳಿಕ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿರುವುದರಿಂದ ಪುಟ್ಟಣ್ಣಯ್ಯ ಅವರ ಸ್ವಗ್ರಾಮ ಕ್ಯಾತನಹಳ್ಳಿ ಗ್ರಾಮದಲ್ಲಿ ಅಂತಿಮ ದರ್ಶನದ ಬಳಿಕ ಮೃತದೇಹವನ್ನು ಮೈಸೂರಿಗೆ ಸಾಗಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.