ನವದೆಹಲಿ: ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಸಾವಿನ ಸುದ್ದಿ ವೈರಲ್ ಬೆನ್ನಲ್ಲೇ ಕೈಲಾಸ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ನಿತ್ಯಾನಂದ ಸಾವನ್ನಪ್ಪಿದ್ದಾರೆಂಬ ಸುದ್ದಿ ವೈರಲ್ ಆಗಿದೆ.
ಈ ಸಂಬಂದ ಇದೀಗ ಸ್ಪಷ್ಟನೆ ನೀಡಿದ ಕೈಲಾಸ, ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಸತ್ತಿಲ್ಲ. ಅವರು ಆರೋಗ್ಯವಾಗಿದ್ದಾರೆ. ಶೀಘ್ರದಲ್ಲೇ ಭಕ್ತರ ಮುಂದೆ ಬರಲಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ನಿತ್ಯಾನಂದ ಸಾವಿನ ಬಗ್ಗೆ ವದಂತಿಗಳು ಹಬ್ಬುತ್ತಿರುವುದು ಇದೇ ಮೊದಲಲ್ಲ. 2022 ರ ವರದಿಗಳು ಅವರು ತೀವ್ರ ಮರೆವಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜನರು, ಹೆಸರುಗಳು ಅಥವಾ ಸ್ಥಳಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಸುದ್ದಿಯೂ ಕೇಳಿಬಂದಿತ್ತು. ನಂತರ ನಿತ್ಯಾನಂದ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಈ ವದಂತಿಗಳನ್ನು ತಳ್ಳಿಹಾಕಿದರು ಮತ್ತು ತಾವು ಸತ್ತಿಲ್ಲ ಆದರೆ ಸಮಾಧಿ ಸ್ಥಿತಿಯಲ್ಲಿದ್ದೆ ಇದು ಆಳವಾದ ಧ್ಯಾನ ಎಂದಿದ್ದರು.
ನಿತ್ಯಾನಂದ ವಿರುದ್ಧ 2019ರಲ್ಲಿ ಕೇಳಿಬಂದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಬಳಿಕ ದೇಶದಿಂದ ಪಲಾಯನ ಮಾಡಿದರು. 'ಅದ್ವೈತ ವೇದಾಂತ'ವನ್ನು ಬೋಧಿಸಿ 'ಕೈಲಾಸ' ಅಥವಾ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ' ಎಂಬ ದೇಶವನ್ನು ರಚಿಸಿದರು.
ನಿತ್ಯಾನಂದ 2019 ರಲ್ಲಿ ತಮ್ಮ ಆಶ್ರಮದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಕ್ರೂರ ಆರೋಪಗಳನ್ನು ಎದುರಿಸಿದ ನಂತರ ದೇಶದಿಂದ ಪಲಾಯನ ಮಾಡಿದರು. ಇತ್ತೀಚಿನ ಸುದ್ದಿ ಅವರ ಸಾವಿನ ಬಗ್ಗೆ ವದಂತಿಯಾಗಿದ್ದು, ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಸಾವಿನ ವರದಿಗಳನ್ನು ಹಲವಾರು ತಮಿಳು ಸುದ್ದಿ ಪ್ರಕಟಣೆಗಳು ಪ್ರಕಟಿಸಿವೆ.