Select Your Language

Notifications

webdunia
webdunia
webdunia
webdunia

ಗ್ರಾಹಕರಿಗೆ ಬಿಗ್ ಶಾಕ್ : ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 25 ರೂ. ಹೆಚ್ಚಳ

ಗ್ರಾಹಕರಿಗೆ ಬಿಗ್ ಶಾಕ್ : ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 25 ರೂ. ಹೆಚ್ಚಳ
ನವದೆಹಲಿ , ಬುಧವಾರ, 18 ಆಗಸ್ಟ್ 2021 (09:13 IST)
ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ರೀಟೇಲರ್ಗಳು ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯನ್ನು ಮತ್ತೆ 25 ರೂ. ಏರಿಕೆ ಮಾಡಿವೆ.

ಜುಲೈ 1ನೇ ತಾರೀಕಿನಂದು ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯನ್ನು 25.50 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ 25 ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 862.5 ರೂ. ಇದೆ.ದೆಹಲಿಯಲ್ಲಿ ಅಡುಗೆ ಅನಿಲ ದರ 859.5 ರೂ. ಇದೆ. ಮುಂಬೈನಲ್ಲಿ 859.5 ರೂ. ಕೋಲ್ಕತ್ತಾದಲ್ಲಿ 886 ರೂ. ಮತ್ತು ಚೆನ್ನೈನಲ್ಲಿ 875.5 ರೂ. ಇದೆ.
ಆಗಸ್ಟ್ 17 2021 ರ ಮಂಗಳವಾರ ಎಲ್ಪಿಜಿ ಸಿಲಿಂಡರ್ಗಳ ದರವು 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ಸಾಮಾನ್ಯವಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಪ್ರತಿ ತಿಂಗಳ ಮೊದಲ ದಿನದಂದು ಬೆಲೆ ಏರಿಕೆ ಮಾಡುತ್ತವೆ. ಇಲ್ಲಿ ಉಲ್ಲೇಖ ಮಾಡಬೇಕಾದ ಅಂಶ ಏನೆಂದರೆ, ದೆಹಲಿಯಲ್ಲಿ ಈ ವರ್ಷದ ಆರಂಭದಲ್ಲಿ- ಅಂದರೆ 2021ರ ಶುರುವಿನಲ್ಲಿ ಸಿಲಿಂಡರ್ ಬೆಲೆ 694 ರೂಪಾಯಿ ಇತ್ತು. ಇದೀಗ ಎಂಟು ತಿಂಗಳಲ್ಲಿ 165 ರೂಪಾಯಿ ಹೆಚ್ಚಳ ಆಗಿದೆ


Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಕೋವಿಶೀಲ್ಡ್ ಲಸಿಕೆ ಕುರಿತು ಎಚ್ಚರಿಕೆ ರವಾನಿಸಿದ WHO