Select Your Language

Notifications

webdunia
webdunia
webdunia
webdunia

ಚಿನ್ನ ಮತ್ತೆ ದುಬಾರಿ; ಬೆಳ್ಳಿ ದರ ಇಳಿಕೆ ಮುಂದುವರಿಕೆ

ಚಿನ್ನ ಮತ್ತೆ ದುಬಾರಿ; ಬೆಳ್ಳಿ ದರ ಇಳಿಕೆ ಮುಂದುವರಿಕೆ
ಬೆಂಗಳೂರು , ಶುಕ್ರವಾರ, 13 ಆಗಸ್ಟ್ 2021 (10:12 IST)
ಬೆಂಗಳೂರು, ಆ. 13: ಚಿನ್ನದ ಬೆಲೆ ಸತತ ಎರಡನೇ ದಿನ ಏರಿಕೆ ಕಂಡಿದೆ. 22 ಕೆರೆಟ್ನ ಆಭರಣ ಚಿನ್ನದ ಬೆಲೆ ಗ್ರಾಮ್ಗೆ 25 ರೂ ಏರಿಕೆ ಕಂಡಿದೆ. 24 ಕೆರೆಟ್ನ ಅಪರಂಜಿ ಚಿನ್ನ ಗ್ರಾಮ್ಗೆ 26 ರೂ ದುಬಾರಿಯಾಗಿದೆ. ಇತ್ತ ಚಿನ್ನದ ಬೆಲೆ ಏರಿದರೆ ಅತ್ತ ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಒಂದು ಗ್ರಾಮ್ ಬೆಳ್ಳಿ ಬೆಲೆಯಲ್ಲಿ 30 ಪೈಸೆ ಇಳಿಕೆಯಾಗಿದೆ. ಇನ್ನು, ಚಿನ್ನದ ರೀತಿಯಲ್ಲಿ ಪ್ಲಾಟಿನಂ ಬೆಲೆಯಲ್ಲೂ ಏರಿಕೆ ಆಗುತ್ತಿದೆ.

ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ ಪ್ರತೀ ಗ್ರಾಮ್ಗೆ 12 ರೂ ಏರಿದೆ.
ಬೆಂಗಳೂರಿನ ಚಿನಿವಾರಪೇಟೆಯಲ್ಲಿ 10 ಗ್ರಾಂ ಅಪರಂಜಿ ಚಿನ್ನ (24 Carat Gold) ಬೆಲೆ ನಿನ್ನೆ 47,300 ರೂ ಇತ್ತು. ಇವತ್ತು ಅಪರಂಜಿ ಚಿನ್ನದ ಬೆಲೆ 47,560 ರೂ ಆಗಿದೆ. ಹೆಚ್ಚೂ ಕಡಿಮೆ ಪ್ರತೀ ಹತ್ತು ಗ್ರಾಮ್ಗೆ 260 ರೂನಷ್ಟು ಏರಿಕೆ ಕಂಡಿದೆ. ಇನ್ನು, 10 ಗ್ರಾಂ ಆಭರಣ ಚಿನ್ನ (22 Carat Gold) 43,600 ರೂ ದರ ಹೊಂದಿದೆ. ಇದೇ ವೇಳೆ, ಬೆಳ್ಳಿ ದರ ಇಳಿಕೆ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ಭಾರತದ ಬಹುತೇಕ ಕಡೆ ಬೆಳ್ಳಿ ಬೆಲೆ ಪ್ರತೀ ಗ್ರಾಮ್ಗೆ 30 ಪೈಸೆ ಇಳಿಕೆ ಕಂಡಿದೆ. ನಿನ್ನೆ 80 ಪೈಸೆ ಮತ್ತು ಮೊನ್ನೆ ಕೂಡ 30 ಪೈಸೆಯಷ್ಟು ಇಳಿಕೆ ಕಂಡಿತ್ತು. 100 ಗ್ರಾಮ್ ಬೆಳ್ಳಿ ಬೆಲೆ 6,250 ರೂ ನಿಂದ 6,230 ರೂಪಾಯಿಗೆ ಇಳಿದಿದೆ. ನಾಲ್ಕು ದಿನಗಳ ಹಿಂದೆ ಸಿಲ್ವರ್ ದರ ಒಂದು ಕಿಲೋಗೆ ಬರೋಬ್ಬರಿ 1 ಸಾವಿರ ರೂಪಾಯಿಷ್ಟು ಇಳಿಕೆ ಕಂಡಿತ್ತು. ಮೂರು ದಿನಗಳ ಹಿಂದೆ 383 ರೂಪಾಯಿಯಷ್ಟು ಬೆಲೆ ತಗ್ಗಿತ್ತು. ಮೊನ್ನೆ ಒಂದು ಕಿಲೋ ಬೆಳ್ಳಿ ಬೆಲೆಯಲ್ಲಿ 300 ರೂ ಇಳಿಕೆಯಾಗಿತ್ತು.
ಬೆಂಗಳೂರಿನಲ್ಲಿ ಸದ್ಯ ಬೆಳ್ಳಿ ಬೆಲೆ ಹತ್ತು ಗ್ರಾಮ್ಗೆ 623 ರೂ ಇದೆ. ಮುಂಬೈ, ದೆಹಲಿ, ಕೋಲ್ಕತಾ, ಪುಣೆ, ಜೈಪುರ, ಲಕ್ನೋ ಮೊದಲಾದ ನಗರಗಳಲ್ಲೂ ಇದೇ ದರ ಇದೆ. ಕೇರಳ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಬೆಳ್ಳಿ ಬೆಲೆ ತುಸು ದುಬಾರಿ ಇದ್ದು ಅಲ್ಲಿ ಹತ್ತು ಗ್ರಾಮ್ ಸಿಲ್ವರ್ 676 ರೂ ದರ ಹೊಂದಿದೆ.
ಇತ್ತ ಬೆಳ್ಳಿ ಬೆಲೆ ಇಳಿಕೆ ಕಾಣುತ್ತಿರುವಂತೆಯೇ ಪ್ಲಾಟಿನಂ ಬೆಲೆ ಏರುತ್ತಿದೆ. ಸತತ ನಾಲ್ಕನೇ ದಿನ ಬೆಲೆ ಏರಿಕೆ ಕಂಡಿದೆ. ಪ್ರತೀ ಗ್ರಾಮ್ ಪ್ಲಾಟಿನಂ ಬೆಲೆಯಲ್ಲಿ 12 ರೂ ಏರಿಕೆಯಾಗಿದೆ. ಆಗಸ್ಟ್ 9ರಂದು ಗ್ರಾಮ್ ಪ್ಲಾಟಿನಂಗೆ ಇದ್ದ 2,320 ರೂ ಬೆಲೆ ಇದೀಗ 2408 ರೂಗೆ ಏರಿದೆ.
ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ (22 Carat Gold Price):
1 ಗ್ರಾಮ್: 4,360 ರೂ
10 ಗ್ರಾಮ್: 43,600 ರೂ
100 ಗ್ರಾಮ್: 4,36,000 ರೂ
ಅಪರಂಜಿ ಚಿನ್ನದ ಬೆಲೆ (24 Carat Gold Price):
1 ಗ್ರಾಮ್: 4,756 ರೂ
10 ಗ್ರಾಮ್: 47,560 ರೂ
100 ಗ್ರಾಮ್: 4,77,600 ರೂ
ಬೆಂಗಳೂರಿನಲ್ಲಿ ಬೆಳ್ಳಿ ದರ (Silver Rate):
1 ಗ್ರಾಮ್: 62.30 ರೂ
10 ಗ್ರಾಮ್: 623 ರೂ
100 ಗ್ರಾಮ್: 6,230 ರೂ
1 ಕಿಲೋ: 62,300
ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ (Platinum Price):
1 ಗ್ರಾಮ್: 2,408 ರೂ
10 ಗ್ರಾಮ್: 23,960 ರೂ


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಲಸಿಕೆ ನಿರಾಕರಿಸಿದ್ದಕ್ಕೆ ವಾಯುಪಡೆ ಉದ್ಯೋಗಿ ವಜಾ!