Select Your Language

Notifications

webdunia
webdunia
webdunia
webdunia

ನಟಿಗೆ ಹೊಟೇಲ್‌ಗೆ ಆಹ್ವಾನಿಸಿ, ಅಶ್ಲೀಲ ಸಂದೇಶ ಆರೋಪ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಮಮ್ಕೂಟತಿಲ್ ನಡೆಗೆ ಬಿಗ್ ಶಾಕ್‌

ಅನುಚಿತ ವರ್ತನೆ

Sampriya

ಬೆಂಗಳೂರು , ಗುರುವಾರ, 21 ಆಗಸ್ಟ್ 2025 (15:30 IST)
Photo Credit X
ನಟಿ ರಿನಿ ಜಾರ್ಜ್ ಅವರಿಂದ ಗಂಭೀರ ಆರೋಪದ ಬೆನ್ನಲ್ಲೇ ಪಾಲಕ್ಕಾಡ್ ಶಾಸಕ ರಾಹುಲ್ ಮಮ್ಕೂಟತಿಲ್ ಅವರು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

"ಯಾರೂ ನನ್ನ ರಾಜೀನಾಮೆ ಕೇಳಿಲ್ಲ. ನಾನು ಕಾನೂನು ಅಥವಾ ಸಂವಿಧಾನವನ್ನು ಉಲ್ಲಂಘಿಸುವ ಯಾವುದೇ ಕೃತ್ಯವನ್ನು ಮಾಡಿಲ್ಲ. ನನ್ನ ವಿರುದ್ಧ ಯಾವುದೇ ಔಪಚಾರಿಕ ದೂರುಗಳಿಲ್ಲ. ಆದರೆ, ನಾನು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ನಾನು ನಿರಪರಾಧಿ ಎಂದು ಸಾಬೀತುಪಡಿಸುತ್ತೇನೆ" ಎಂದು ಮಮಕೂಟತಿಲ್ ಅಡೂರಿನ ತಮ್ಮ ಮನೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

"ನಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರ ಕೆಲಸ ನನ್ನನ್ನು ರಕ್ಷಿಸುವುದಲ್ಲ, ಮತ್ತು ಅವರು ಅದನ್ನು ಮಾಡಬೇಕೆಂದು ನಾನು ಬಯಸುವುದಿಲ್ಲ. ನನ್ನ ನಿರಪರಾಧಿ ಎಂದು ಸಾಬೀತುಪಡಿಸುವ ಜವಾಬ್ದಾರಿ ನನಗಿದೆ ಮತ್ತು ಅದು ಅವರಲ್ಲ" ಎಂದು ರಾಹುಲ್ ಹೇಳಿದರು. 

ಅವರೂ ಸೇರಿದಂತೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಎಲ್‌ಡಿಎಫ್ ಸರ್ಕಾರದ ತಪ್ಪುಗಳನ್ನು ಬಹಿರಂಗಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಲಯಾಳಂ ನಟಿ ರಿನಿ ಆನ್ ಜಾರ್ಜ್ ಅವರು ಕಾಂಗ್ರೆಸ್ ನಾಯಕನ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. 

ಕಾಂಗ್ರೆಸ್ ನಾಯಕ ನನಗೆ ಸಂದೇಶ ಕಳಹುಸಿ ಹೊಟೇಲ್‌ಗೆ ಆಹ್ವಾನಿಸಿದ್ದಾನೆ. ಈ ಸಂಬಂಧ ಪಕ್ಷಕ್ಕೆ ಪಕ್ಷಕ್ಕೆ ದೂರು ನೀಡುವುದಾಗಿ ಬೆದರಿಕೆ ಹಾಕಿದಾಗ, ಅವನು ಹಾಗೆ ಮಾಡುವಂತೆ ಸವಾಲು ಹಾಕಿದನು.

ರಿನಿ ಮಾಡಿದ ಆರೋಪದಲ್ಲಿ,  ಆತನ ನನಗೆ  ಪಂಚತಾರಾ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸುತ್ತೇನೆ, ನೀವು ಬರಬೇಕು. ನಾನು ತೀವ್ರವಾಗಿ ಪ್ರತಿಕ್ರಿಯಿಸಿದ್ದರಿಂದ ಸ್ವಲ್ಪ ಸಮಯದವರೆಗೆ ಯಾವುದೇ ಸಮಸ್ಯೆಯಾಗಿದೆ. ಆದರೆ ಮತ್ತೇ ಪುನರಾವರ್ತನೆಯಾಯಿತು. ಅನೇಕ ಮಹಿಳೆಯರು ಇದೇ ರೀತಿಯ ಅನುಭವಗಳನ್ನು ಎದುರಿಸಿದ್ದಾರೆ," ಎಂದು ರಿನಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಮಗೆ ಪೇ ಸಿಎಂ ಎಂದ್ರು, ಈಗ ಕಾಂಗ್ರೆಸ್ ನದ್ದು ಇನ್ನೇನು: ಬಿವೈ ವಿಜಯೇಂದ್ರ