Select Your Language

Notifications

webdunia
webdunia
webdunia
webdunia

ನಮಗೆ ಪೇ ಸಿಎಂ ಎಂದ್ರು, ಈಗ ಕಾಂಗ್ರೆಸ್ ನದ್ದು ಇನ್ನೇನು: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಗುರುವಾರ, 21 ಆಗಸ್ಟ್ 2025 (15:21 IST)
ಬೆಂಗಳೂರು: ನಮಗೆ ಪೇ ಸಿಎಂ ಅಪಪ್ರಚಾರ ಮಾಡಿದ್ರು ಈಗ ಕಾಂಗ್ರೆಸ್ ಸರ್ಕಾರದ್ದು ಕತೆ ಏನು? ಗುತ್ತಿಗೆದಾರರ ಸಂಕಷ್ಟ ಕೇಳೋರಿಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಕಾಂಗ್ರೆಸ್ ಆಡಳಿತದಲ್ಲಿ ಗುತ್ತಿಗೆದಾರರ ಸಂಕಷ್ಟ ಹೆಚ್ಚಾಗಿದೆ. ಕಮಿಷನ್ ಶೇ.40 ರನ್ನೂ ಮೀರಿದೆ ಎಂದು ಆರೋಪಿಸಿದ್ದಾರೆ. ಇದರ ಬಗ್ಗೆ ಈಗ ಬಿವೈ ವಿಜಯೇಂದ್ರ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ 'Pay CM' ಹೆಸರಿನಲ್ಲಿ ಅಪಪ್ರಚಾರದ ಮುಂಚೂಣಿಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ಸಿಗರು ಸರ್ಕಾರದ ಖಜಾನೆಯನ್ನು ಬರಿದುಮಾಡಿ ಕುಳಿತಿದ್ದಾರೆ. ಗುತ್ತಿಗೆದಾರರುಗಳಿಂದ ಕಮಿಷನ್ ವಸೂಲಿ ಮಾಡುವುದರಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಡಿ.ಕೆಂಪಣ್ಣನವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಹೊರಿಸಿದ್ದರು‌, ಸದ್ಯ ಈಗಿನ ಅಧ್ಯಕ್ಷರೂ ಸಹ ಅದೇ ಆರೋಪವನ್ನು ಮಾಡುತ್ತಿದ್ದಾರೆ. ಕಮಿಷನ್ ದಂಧೆ ಮಿತಿಮೀರಿ ಹೋಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.

ಇತ್ತ ಗುತ್ತಿಗೆದಾರರ ಸಂಕಷ್ಟ ಕೇಳುವವರಿಲ್ಲದಂತಾಗಿದ್ದರೆ, ಅತ್ತ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ, ಗುತ್ತಿಗೆದಾರರು ಆರೋಪಿಸುತ್ತಿರುವಂತೆ ಕಮಿಷನ್ ದಂಧೆಯ ಕುರಿತು ಲೋಕಾಯುಕ್ತ ಸ್ವಯಂ ದೂರು ದಾಖಲಿಸಿಕೊಂಡು ಈ ಕೂಡಲೇ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಯಿದ್ದ ವಾಹನ ಕಾನ್‌ಸ್ಟೇಬಲ್‌ಗೆ ಡಿಕ್ಕಿ, ಯಾರ ಮೇಲೆ ಬಿತ್ತು ಕೇಸ್‌ ಗೊತ್ತಾ