ನವದೆಹಲಿ: ಬಿಜೆಪಿಯಲ್ಲಿ ಅಧಿಕಾರ, ಹುದ್ದೆ ಪಡೆಯಬೇಕೆಂದರೆ ಒಂದು ಪುಡಿ ರೌಡಿಯಾಗಿರಬೇಕು ಇಲ್ಲದಿದ್ರೆ ರೇಪಿಸ್ಟ್ ಆಗಿರಬೇಕು. ಇಲ್ಲದಿದ್ರೆ ಕನಿಷ್ಠ ಪಕ್ಷ ಎರಡ್ಮೂರು ಬಾರಿ ಜೈಲಿಗಾದರೂ ಹೋಗಿ ಬಂದಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಿಗಾಗಿಯೇ ಪ್ರತ್ಯೇಕ ಸೆಲ್ ಮಾಡಿಕೊಂಡಿರುವ ಕರ್ನಾಟಕದ ಬಿಜೆಪಿ ಘಟಕವು, ಪವಿತ್ರ ಖಾದಿ ಬಟ್ಟೆ ಬಗ್ಗೆ ಮಾತಾಡುವುದು ಹಾಸ್ಯಾಸ್ಪದವಲ್ಲ. ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದರು.
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷನೇ ಚೆಕ್ ಮೂಲಕ ಹುದ್ದೆ ಗಿಟ್ಟಿಸಿಕೊಂಡಿರುವಾಗ ಕೇಂದ್ರದ ಗೃಹ ಸಚಿವರನ್ನೇ ಕೋರ್ಟ್ ಗಡಿಪಾರು ಮಾಡಿರುವಾಗ, ರಾಜಧರ್ಮ ಪಾಲಿಸದ ಪ್ರಧಾನ ಮಂತ್ರಿಯೇ ಇರುವಾಗ ಉಳಿದವರದ್ದು ಯಥಾ ರಾಜಾ, ತಥಾ ಪಟಾಲಂ ಅಲ್ವೇ ಎಂದು ಪ್ರಶ್ನೆ ಮಾಡಿದರು.
ನಾನು ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿರುವಾಗ ನರೇಂದ್ರ ಮೋದಿ ಅವರ ಹೆಸರೇ ಇರಲಿಲ್ಲ. ನಾನು 50 ವರ್ಷಗಳ ಹಿಂದೆ ರಾಜಕೀಯಕ್ಕೆ ಬಂದೆ. 45 ವರ್ಷಗಳಿಂದಲೇ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದೇನೆ. ಮೋದಿ ಅವರನ್ನು ಬೈದು ರಾಜಕಾರಣದಲ್ಲಿರಬೇಕಾದ ಸ್ಥಿತಿ ನನಗೆ ಬಂದಿಲ್ಲ ಎಂದರು.