ಬೆಂಗಳೂರು: ಇಂದು ಕೆಆರ್ ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಹೋಗುವ ಹೆಬ್ಬಾಳ ಫ್ಲೈಓವರ್ ರಸ್ತೆಯನ್ನು ಸಿಎಂ ಸಿದ್ದರಾಮಯತ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದ್ದಾರೆ. ಆದರೆ ಈ ವೇಳೆಯೇ ವಿಪರೀತ ಟ್ರಾಫಿಕ್ ಜಾಮ್ ಆಗಿದ್ದು ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ಹೊರಹಾಕಿದ್ದಾರೆ.
ಫ್ಲೈ ಓವರ್ ಉದ್ಘಾಟನೆ ನಿಮಿತ್ತ ರಸ್ತೆಯಲ್ಲಿ ಸಂಚಾರ ಮಾಡಲು ನಿರ್ಬಂಧ ಹೇರಲಾಗಿತ್ತು. ಇಂದು ಸೋಮವಾರವಾಗಿದ್ದು ಬೆಳಿಗ್ಗಿನ ಹೊತ್ತು ಅನೇಕ ಜನ ಕಚೇರಿ, ಶಾಲಾ-ಕಾಲೇಜು ನಿಮಿತ್ತ ಓಡಾಡುವ ಸಂದರ್ಭವಾಗಿದೆ.
ಆದರೆ ಈ ಹೊತ್ತಿನಲ್ಲೇ ಫ್ಲೈ ಓವರ್ ಉದ್ಘಾಟನೆ ಕಾರ್ಯಕ್ರವಿಟ್ಟುಕೊಂಡಿದ್ದರಿಂದ ಸಾಕಷ್ಟು ಜನ ಪರದಾಡಿದರು. ಜೊತೆಗೆ ಟ್ರಾಫಿಕ್ ದಟ್ಟಣೆ ಹೆಚ್ಚಾಯ್ತು. ಇದರಿಂದ ಜನ ಸರ್ಕಾರಕ್ಕೆ ಹಿಡಿ ಶಾಪ ಹಾಕುವಂತಾಯಿತು. ಇದರ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕೂಡಾ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ಇಂತಹದ್ದೊಂದು ಉದ್ಘಾಟನಾ ಕಾರ್ಯಕ್ರಮವನ್ನು ಸೋಮವಾರ ಅದೂ ಜನದಟ್ಟಣೆ ಹೆಚ್ಚಿರುವ ಬೆಳಿಗಿನ ಹೊತ್ತು ಮಾಡುವ ಅವಶ್ಯಕತೆಯಿತ್ತೇ? ಎಂದು ಕಿಡಿ ಕಾರಿದ್ದಾರೆ. ಸಾಮಾನ್ಯವಾಗಿ ಇಂತಹ ಉದ್ಘಾಟನಾ ಕಾರ್ಯಕ್ರಮಗಳನ್ನು ಭಾನುವಾರ ಮಾಡಲಾಗುತ್ತದೆ. ಆದರೆ ಸೋಮವಾರ ಬ್ಯುಸಿ ಹೊತ್ತಿನಲ್ಲಿ ಮಾಡಿದ್ದು ಅಸಮಾಧಾನಕ್ಕೆ ಕಾರಣವಾಯಿತು.