ಬೆಂಗಳೂರು: ನಿನ್ನೆ ನಮ್ಮ ಮೆಟ್ರೋ ಯೆಲ್ಲೊ ಲೈನ್ ಉದ್ಘಾಟನೆ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿ ಗುಸು ಗುಸು ಮಾತನಾಡಿದ್ದೇನೆಂದು ಸ್ವತಃ ಡಿಕೆ ಶಿವಕುಮಾರ್ ಬಹಿರಂಗಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಭಾಷಣ ಮಾಡಲೆಂದು ಎದ್ದು ಹೋಗುತ್ತಿದ್ದಂತೇ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ವೇದಿಕೆಯಲ್ಲಿದ್ದ ಮೋದಿ ಪಕ್ಕದ ಆಸನಕ್ಕೆ ಒಂದು ಫೈಲ್ ಹಿಡಿದು ಬಂದು ಏನೂ ಗಹನವಾಗಿ ಮಾತನಾಡುತ್ತಿದ್ದರು.
ಅವರ ಈ ಮಾತುಕತೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಕೆಲವರು ಬಹುಶಃ ಡಿಕೆಶಿ ಬಿಜೆಪಿಗೆ ಬಂದು ಸಿಎಂ ಆಗುವ ಬಗ್ಗೆ ಚರ್ಚೆ ನಡೆಸಿರಬೇಕು ಎಂದು ಕೆಲವರು ಟ್ರೋಲ್ ಮಾಡಿದ್ದರು. ಸಿಎಂ ಇಲ್ಲದೇ ಇದ್ದಾಗ ಡಿಕೆಶಿ ಅಷ್ಟೊಂದು ಗಹನವಾಗಿ ಚರ್ಚಿಸಿದ್ದೇನೆಂದು ಎಲ್ಲರ ಪ್ರಶ್ನೆಯಾಗಿತ್ತು.
ಅಸಲಿಗೆ, ಡಿಕೆ ಶಿವಕುಮಾರ್ ಬೆಂಗಳೂರಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರವಿರುವ ಪತ್ರವೊಂದನ್ನು ಪ್ರಧಾನಿಗೆ ನೀಡಿದ್ದಾಗಿ ಹೇಳಿದ್ದಾರೆ. ಇದರ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಣೆ ನೀಡಿದ್ದೇನೆ ಮತ್ತು ನಮ್ಮ ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಕೇಂದ್ರದ ನೆರವು ಬೇಕೆಂದು ಕೇಳಿದ್ದಾಗಿ ಹೇಳಿದ್ದಾರೆ.