Webdunia - Bharat's app for daily news and videos

Install App

ಜೈಲು ಸೇರುವ ಭೀತಿಯಲ್ಲಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ಗೆ ಬಿಗ್‌ ರಿಲೀಫ್‌

Sampriya
ಬುಧವಾರ, 15 ಜನವರಿ 2025 (15:35 IST)
Photo Courtesy X
ನವದೆಹಲಿ: ಡುಬ್ಲಿಕೇಟ್‌ ಪ್ರಮಾಣಪತ್ರ ಬಳಸಿ ನಾಗರಿಕ ಸೇವಾ ಪರೀಕ್ಷೆಯ ಲಾಭ ಪಡೆದು, ಹುದ್ದೆಯಿಂದ ವಜಾಗೊಂಡಿರುವ ಪೂಜಾ ಖೇಡ್ಕರ್ ಅವರನ್ನು ಫೆ. 14ರವರೆಗೆ ಬಂಧಿಸದಂತೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿದೆ. ಬಂಧನ ಭೀತಿಯಲ್ಲಿದ್ದ ಪೂಜಾಗೆ ಬಿಗ್‌ ರಿಲೀಫ್‌ ಸಿಕ್ಕಿದೆ

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ  ಐಎಎಸ್‌ ಪ್ರೊಬೆಷನರಿ ಮಾಜಿ ಅಧಿಕಾರಿ ಖೇಡ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ, ಈ ಬಗ್ಗೆ ಆದೇಶ ಹೊರಡಿಸಿ ದೆಹಲಿ ಸರ್ಕಾರ ಹಾಗೂ ಯುಪಿಎಸ್‌ಸಿ ಬೋರ್ಡ್‌ಗೆ ನೋಟಿಸ್ ಜಾರಿ ಮಾಡಿತು.

ಫೆ. 14ರ ಒಳಗಾಗಿ ನೋಟಿಸ್‌ಗೆ ಉತ್ತರಿಸಬೇಕು ಎಂದಿರುವ ನ್ಯಾಯಾಲಯವು, ಆವರೆಗೂ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಸೂಚಿಸಿದೆ. ಖೇಡ್ಕರ್‌ ಪರ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲುಥ್ರಾ, ನಿರೀಕ್ಷಣಾ ಜಾಮೀನು ರದ್ದು ಮಾಡಿದ ಹೈಕೋರ್ಟ್ ಅಭಿಪ್ರಾಯಗಳ ವಿರುದ್ಧ ಗಂಭೀರ ವಾದ ಮಾಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಕೋರ್ಟ್‌, ಈವರೆಗೂ ಖೇಡ್ಕರ್ ಅವರಿಗೆ ಏನೂ ಆಗಿಲ್ಲ. ಆವರನ್ನು ಯಾರೂ ಮುಟ್ಟಿಲ್ಲ ಎಂದಿತು. ಖೇಡ್ಕರ್ ಈಗೇನು ಮಾಡುತ್ತಿದ್ದಾರೆ ಎನ್ನುವ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಸದ್ಯ ಅವರು ಕೆಲಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
 <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

Air India Plane crash: ಜೀವ ಉಳಿಸಿಕೊಳ್ಳಲು ಹಾಸ್ಟೆಲ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು video

Air India Plane crash: ವಿಮಾನ ದುರಂತದಲ್ಲಿ ಮನುಷ್ಯರೇ ಭಸ್ಮವಾದರೂ ಇದೊಂದು ವಸ್ತು ಹಾಗೆಯೇ ಇತ್ತು video

ಮುಂದಿನ ಸುದ್ದಿ
Show comments