Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕರ ಕಾರು ಬಂದಾಗ ಎಚ್ಚರವಾಗಿರಿ : ಡಿ.ಕೆ.ಶಿವಕುಮಾರ್

ಬಿಜೆಪಿ ನಾಯಕರ ಕಾರು ಬಂದಾಗ ಎಚ್ಚರವಾಗಿರಿ : ಡಿ.ಕೆ.ಶಿವಕುಮಾರ್
ಬೆಂಗಳೂರು , ಶುಕ್ರವಾರ, 8 ಅಕ್ಟೋಬರ್ 2021 (12:53 IST)
ಬೆಂಗಳೂರು, ಅ.8 :  ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕದಲ್ಲಿ ಹೋಗುವಾಗ ನಿಮ್ಮ ಫೋನ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ. ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ಎಂದು ತಿಳಿಯುವುದಿಲ್ಲ. ಹೀಗಿದ್ದಾಗ, ನಿಮ್ಮ ವೀಡಿಯೊ ಮುಂದೆ ಮಹತ್ವದ ಸಾಕ್ಷ್ಯವಾಗಿರಲಿದೆ.

ಇದು ದೇಶಕ್ಕೆ ನೀವು ನೀಡುವ ಉತ್ತಮ ಕೊಡುಗೆಯಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ರೈತ ವಿರೋ ಕಾಯ್ದೆಯ ವಿರುದ್ಧ ಅಖಿಂಪುರದಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಬಿಜೆಪಿ ನಾಯಕ ಜೀಪು ಚಲಾಯಿಸಿದ ವೀಡಿಯೋವನ್ನು ಬಗ್ಗೆ ಪ್ರಸ್ತಾಪ ಮಾಡಿರುವ ಅವರು, ಟ್ವಿಟರ್ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.
ಅಂಬಾಲಾ ಬಳಿಯ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಬಿಜೆಪಿ ಸಂಸದ ನಯಾಬ್ ಸೈನಿ ಜೀಪು ಹರಿಸಿದ್ದಾರೆ. ಬಿಜೆಪಿಯ ಯಾವುದೇ ನಾಯಕರು ನಿಮ್ಮ ಪಕ್ಕದಲ್ಲಿ ಹಾದುಹೋಗುವಾಗ ಎಚ್ಚರದಿಂದಿರಿ. ಇತ್ತೀಚೆಗೆ ಬಿಜೆಪಿ ನಾಯಕರು ಜನರ ಮೇಲೆ ವಾಹನ ಚಲಾಯಿಸಿ ಸಾಯಿಸುತ್ತಿದ್ದಾರೆ.
ಇಂತಹ ಘಟನೆ ನಡೆದರೆ ರೆಕಾರ್ಡ್ ಮಾಡಿ ಮತ್ತು ಜಾಗೃತರಾಗಿರಿ ಎಂದು ಪ್ರತಿಯೊಬ್ಬರಲ್ಲೂ ನಾನು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರದ ಅತಿರೇಕದ ವಿರುದ್ಧ ಸೋಮವಾರದಂದು ಕರ್ನಾಟಕ ಕಾಂಗ್ರೆಸ್, ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಮತ್ತೊಂದೆಡೆ, ಬಿಜೆಪಿ ನಾಯಕರ ದರ್ಪವನ್ನು ಖಂಡಿಸಲು ಮತ್ತು ದುರ್ಘಟನೆಗೆ ಸಂಬಂಸಿದ ಪ್ರಮುಖ ಆರೋಪಿಗಳನ್ನು ಬಂಸದ ಪೊಲೀಸರ ಕಾರ್ಯವೈಖರಿಯ ವಿರುದ್ಧ ಕಾಂಗ್ರೆಸ್ ನಾಯಕರು ಉತ್ತರ ಪ್ರದೇಶದಲ್ಲಿ ಪ್ರತಿಭಟಿಸಿದ್ದಾರೆ.
ಮೃತ ರೈತರ ಕುಟುಂಬಗಳನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂ ಮತ್ತು ಪ್ರಮುಖ ಕಾಂಗ್ರೆಸ್ ಮುಖಂಡರು ಖಿಂಪುರಖೇರಿ ಘಟನೆಯಲ್ಲಿ ಜೀವ ಕಳೆದುಕೊಂಡು ರೈತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಪಂಜಾಬ್ ಮತ್ತು ಚತ್ತೀಸ್ಗಡ್ ಸರ್ಕಾರಗಳು ತಲಾ 50 ಲಕ್ಷ ರೂ.ಗಳ ಪರಿಹಾರ ನೀಡುತ್ತಿದ್ದು, ಪ್ರತಿ ಕುಟುಂಬಕ್ಕೆ ಒಟ್ಟೂ 1 ಕೋಟಿ ರೂ.ಪರಿಹಾರ ದೊರೆಯಲಿದೆ ಎಂದು ಅವರು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತವು ವಿಶ್ವಕ್ಕೇ ಮಾದರಿ: ಮೋದಿ