Publish Date: Thu, 02 Dec 2021 (09:38 IST)
Updated Date: Thu, 02 Dec 2021 (09:40 IST)
ದೆಹಲಿ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ಮಮತಾ ಬ್ಯಾನರ್ಜಿಯವರು ಸುದ್ದಿಗೋಷ್ಠಿ ನಡೆಸುವಾಗ ರಾಷ್ಟ್ರಗೀತೆಯನ್ನೇನೋ ಹಾಡಿದರು. ಆದರೆ ಅದನ್ನು ಪೂರ್ತಿಗೊಳಿಸಲಿಲ್ಲ ಮತ್ತು ಮಧ್ಯದಲ್ಲಿಯೇ ಉಳಿತುಕೊಂಡರು ಎಂದು ಬಿಜೆಪಿ ಹೇಳಿದೆ. ಹಾಗೇ, ಮುಂಬೈನಲ್ಲಿ ನಡೆದ ಈ ಸುದ್ದಿಗೋಷ್ಠಿಯ ವಿಡಿಯೋವನ್ನೂ ಶೇರ್ ಮಾಡಿಕೊಂಡಿದೆ.
ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕ, ಮಮತಾ ಬ್ಯಾನರ್ಜಿ ಮೊದಲು ಕುಳಿತುಕೊಂಡೇ ರಾಷ್ಟ್ರಗೀತೆ ಹಾಡಲು ಶುರು ಮಾಡಿದರು. ನಂತರ ಎದ್ದು ನಿಂತರು.
ಸ್ವಲ್ಪ ಹೊತ್ತು ಹಾಡಿ, ರಾಷ್ಟ್ರಗೀತೆಯನ್ನು ಪೂರ್ಣಗೊಳಿಸದೆ ಮತ್ತೆ ಕುಳಿತುಕೊಂಡರು. ಅವರು ರಾಷ್ಟ್ರಗೀತೆ, ಪಶ್ಚಿಮ ಬಂಗಾಳದ ಸಂಸ್ಕೃತಿ ಮತ್ತು ರವೀಂದ್ರನಾಥ್ ಟಾಗೋರ್ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದೆ. ಅಷ್ಟೇ ಅಲ್ಲ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ, ಸಂಸದ ತೇಜಸ್ವಿ ಸೂರ್ಯ ಕೂಡ ಟ್ವೀಟ್ ಮೂಲಕ ಇದನ್ನು ಖಂಡಿಸಿದ್ದಾರೆ.