ಕೋಲ್ಕತ್ತಾ : ಬಿಜೆಪಿ ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತದೆಯೇ? ಎಂದು ಬಿಜೆಪಿ ನೇತೃತ್ವದ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಜಿಎಸ್ಟಿ ಏರಿಕೆ ವಿರುದ್ಧ ಕಿಡಿಕಾರಿದರು.
ಕೋಲ್ಕತ್ತಾದಲ್ಲಿ ಶಹೀದ್ ದಿವಸ್(ಹುತಾತ್ಮರ ದಿನ) ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿದ್ದು, ಕಡ್ಲೆಪುರಿಗೂ ಜಿಎಸ್ಟಿ ಬಂದಿದೆ. ಬಿಜೆಪಿ ಸ್ನೇಹಿತರು ಈಗ ಕಡ್ಲೆಪುರಿಯನ್ನು ತಿನ್ನುವುದಿಲ್ಲ.
ಕಡ್ಲೆಪುರಿ, ಸಿಹಿತಿಂಡಿಗಳು, ಲಸ್ಸಿ, ಮೊಸರು ಮತ್ತು ಬೇವಿನ ಸೊಪ್ಪಿನ ಮೇಲೆ ಎಷ್ಟು ಜಿಎಸ್ಟಿ ವಿಧಿಸಲಾಗಿದೆ? ನಾವು ಏನು ತಿನ್ನುತ್ತೇವೆ? ಹೇಗೆ ತಿನ್ನಬೇಕು? ಎಂದು ಆಕ್ರೋಶ ಹೊರಹಾಕಿದರು.
ರೋಗಿಯನ್ನು ಆಸ್ಪತ್ರೆಗೆ ಸೇರಿಸುವುದರಿಂದಲೂ ಜಿಎಸ್ಟಿಯನ್ನು ವಿಧಿಸಲಾಗಿದೆ. ಈ ವಿಧಾನ ನಮಗೆ ಬೇಡ. ಅದಕ್ಕೆ ನಮ್ಮ ಬಳಿ ತೆಗೆದುಕೊಂಡ ಎಲ್ಲವನ್ನು ಹಿಂತಿರುಗಿಸಿ. ಇಲ್ಲವಾದರೆ ನೀವು ಹೊರಟು ಹೋಗಿ ಎಂದು ಬಿಜೆಪಿ ವಿರುದ್ಧ ತಿರುಗೇಟು ಕೊಟ್ಟರು.