ನಮಗಂತೂ ಮೋದಿ ತಾಯಿ ಹೃದಯ ಕಂಡಿಲ್ಲ, ಶೋಭಕ್ಕ ಮೋದಿ ತಾಯಿ ಹೃದಯ ಎಲ್ಲಿ ಕಂಡ್ರು ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಕಾಂಗ್ರೆಸ್ ಯುವನಾಯಕ ಮೊಹಮ್ಮದ್ ನಲಪಾಡ್ ವ್ಯಂಗ್ಯವಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು ಮಗು ಕುಡಿಯುವ ಹಾಲಿನ ಮೇಲೂ GST ಹಾಕಿದ್ದಾರೆ. ಮೊಸರು, ಅಕ್ಕಿ ಸೇರಿದಂತೆ ಎಲ್ಲದರ ಮೇಲೂ ಟ್ಯಾಕ್ಸ್ ಹೇರಿದ್ದಾರೆ. ಬರೀ ಅಂಬಾನಿ ಅದಾನಿ ಎರಡು ಕಂಪನಿಗಳಿಗೆ ಸೇರಿದ ಸರ್ಕಾರ ಇದಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನಿರುದ್ಯೋಗಿ ಯುವಕರಿಗೆ ಹೇಗೆ ಕೆಲಸ ಕೊಡಿಸುವುದು. ಅವರನ್ನು ಹೇಗೆ ಮುಂದಕ್ಕೆ ತರುವುದು ಎಂಬುದು ಕಾಂಗ್ರೆಸ್ ಪಕ್ಷದ ಯೋಚನೆಯಾಗಿದೆ ಎಂದ್ರು. ಪಿಕ್ ಪಾಕೆಟ್ ಮಾಡೋದು ಹೇಗೆ, ದುಡ್ಡು ಮಾಡೋದು ಹೇಗೆ ಎಂಬುದು ಬಿಜೆಪಿಯವರ ಯೋಜನೆಯಾಗಿದೆ. ಇದರ ವಿರುಧ್ಧ ನಾವು ಹೋರಾಟ ಮಾಡಲು ಯೋಜನೆ ರೂಪಿಸಿದ್ದೇವೆ. ಕಾಂಗ್ರೆಸ್ನಲ್ಲಿ ಯಾವುದೇ ಬಣಗಳಿಲ್ಲ, ಸಾಮೂಹಿಕ ನಾಯಕತ್ವದಿಂದ ಚುನಾವಣೆಗೆ ಹೋಗುತ್ತೇವೆ. ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಒಂದಾದರೂ ಜನಪರ ಕಾರ್ಯಕ್ರಮ ತಂದಿದ್ದಾರಾ ಎಂದು ಪ್ರಶ್ನಿಸಿದ ಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.