Select Your Language

Notifications

webdunia
webdunia
webdunia
webdunia

ಗಾಂಧಿ ಕುಟುಂಬದ ಋಣ ತೀರಿಸುವ ಸಮಯ ಬಂದಿದೆ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಗಾಂಧಿ ಕುಟುಂಬದ ಋಣ ತೀರಿಸುವ ಸಮಯ ಬಂದಿದೆ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು , ಗುರುವಾರ, 21 ಜುಲೈ 2022 (17:10 IST)
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ವಿಚಾರಣೆ ವಿರೋಧಿಸಿದ ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ ಮಾತನಾಡಿ ' ಗಾಂಧಿ ಕುಟುಂಬ ಹೆಸರಲ್ಲಿ 3-4 ತಲೆಮಾರುಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡ ನಾವು ಈಗ ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ' ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಕಾಂಗ್ರೆಸ್‌ ಸುಮಾರು 70 ವರ್ಷ ದೇಶ ಆಳಿದೆ. ಕಾಂಗ್ರೆಸ್‌ನವರೇ ಆದ ನಾವೆಲ್ಲರೂ ಮುಂದಿನ ಮೂರ್ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಆಸ್ತಿ, ಹಣ ಗಳಿಸಿದ್ದೇವೆ. ಅಧಿಕಾರ ಅನುಭವಿಸಿದ್ದೇವೆ. ಇದೀಗ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರತ್ರಿಕೆ ಖರೀದಿ ಅವ್ಯವಹಾರ ಮತ್ತು ಹಣ ವರ್ಗಾವಣೆ ಆರೋಪ ಮೇಲೆ ವಿಚಾರಣೆ ನಡೆಯುತ್ತಿದೆ. ದೇಶ ಉಳಿಯಲು, ಕಾಂಗ್ರೆಸ್‌ ಉಳಿಸಲು ನಾವೆಲ್ಲರೂ ಒಟ್ಟಾಗಿ ಸೋನಿಯಾ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡಬೇಕು' ಎಂದು ಮನವಿ ಮಾಡಿದರು.
 
'ಗಾಂಧಿ ಕುಟುಂಬದ ಋಣ ತೀರಿಸದೇ ಹೋದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ. ಪಕ್ಷ ಕುಟುಂಬ ಇದ್ದಂತೆ, ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ಮನಸ್ತಾಪಗಳೆಲ್ಲವು ಸಹಜ. ಅವೆಲ್ಲವುಗಳನ್ನು ಬದಿಗೊತ್ತಿ ನಾವೆಲ್ಲರು ಒಂದಾಗಬೇಕು. ಸಂಕಷ್ಟದಲ್ಲಿರುವ ಸೋನಿಯಾ ಅವರೊಂದಿಗೆ ನಿಲ್ಲಬೇಕು. ಆಗ ಮಾತ್ರ ನಾವು ತಿನ್ನುವ ಎರಡು ಹೊತ್ತಿನ ಊಟಕ್ಕೆ ಸಾರ್ಥಕ ಬರುತ್ತದೆ' ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕರ ಪ್ರತಿಭಟನೆ ರಾಜಧಾನಿಯಲ್ಲಿ ಧಗ ಧಗ