Select Your Language

Notifications

webdunia
webdunia
webdunia
webdunia

ಸೋಮವಾರದಿಂದ ಅಗತ್ಯ ವಸ್ತುಗಳ ಮೇಲೆ ಜಿ ಎಸ್ ಟಿ ಜಾರಿ

ಸೋಮವಾರದಿಂದ ಅಗತ್ಯ ವಸ್ತುಗಳ ಮೇಲೆ ಜಿ ಎಸ್ ಟಿ ಜಾರಿ
bangalore , ಭಾನುವಾರ, 17 ಜುಲೈ 2022 (16:07 IST)
ಸೋಮವಾರದಿಂದ ದಿನಬಳಕೆಯ ವಿವಿಧ ವಸ್ತಗಳ ಮತ್ತು ಹಲವು ಸೇವೆಗಳ ಮೇಲೆ ಜಿ ಎಸ್ ಟಿ  ತೆರಿಗೆ ವಿಧಿಸಲು  ಜಿ ಎಸ್ ಟಿ ಮಂಡಳಿ ನಿರ್ಧಾರ ಮಾಡಿದೆ. ಆಹಾರ ಪದಾರ್ಥಗಳಿಂದ ಹಿಡಿದು ಉಡುಪಿನ ಮೇಲೂ ಜಿ ಎಸ್ ಟಿ ವಿಧಿಸಲಾಗ್ತದೆ. ಇನ್ನು ನಾಳೆಯಿಂದ ಜಿ ಎಸ್ ಟಿ ದರ ಜಾರಿಯಾಗಲಿದೆ.ಹೀಗಾಗಿ  ಜನಸಾಮಾನ್ಯರು ಕೇಂದ್ರ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದಾರೆ.

ಯಾವ ಯಾವ ವಸ್ತು ಬೆಲೆ ದುಬಾರಿ ಅಂತಾ ನೋಡುವುದಾದ್ರೆ
 
- ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು,  ಜೇನುತುಪ್ಪ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ, ಇತರೆ ಧಾನ್ಯ ಗಳು, ಮಂಡಕ್ಕಿ, ಸಾವಯವ ಗೊಬ್ಬರ,
 
- ಪ್ಯಾಕ್ ಮಾಡಿದ ಬ್ರಾಂಡೆಡ್ ಭೂಪಟ, ಚಾರ್ಟ್ , ಅಟ್ಲಾಸ್ , ಸೋಲಾರ್  ವಾಟರ್ ಹೀಟರ್, ಮುದ್ರಣ, ಬರ ಚಿತ್ರಕಲೆಯ ಇಂಕ್, ಎಲ್ ಇಡಿ ಬಲ್ಡ್ ಎಲ್ ಐಡಿ ಲ್ಯಾಪ್
 
- ಚರ್ಮದ ಸಿದ್ಧ ಉತ್ಪನ್ನಗಳು, ಟೈಲರಿಂಗ್ , ಜವಳಿ ಸೇವೆಗಳು, ಅಂಚೆ ಇಲಾಖೆ, ಬುಕ್ ಪೋಸ್ಟ್, 10 ಗ್ರಾಂಗಿಂತ ಕಡಿಮೆ ಇರುವ ಲಕೋಟೆ,ಚೆಕ್ ಬುಕ್
 
- ನಿತ್ಯದ ಬಾಡಿಗೆ 1000 ರೂ ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೂ ಇನ್ನು ಶೇ.12ರಷ್ಟು ತೆರಿಗೆ ಜಾರಿ
 
- ದಿನಕ್ಕೆ 5000 ರು.ಗಿಂತ ಹೆಚ್ಚಿನ ಬಾಡಿಗೆ ವಿಧಿಸುವ ಸಾರ್ವಜನಿಕ ಧಾರ್ಮಿಕ ಕೇಂದ್ರಗಳು, ಮಾಸಿಕ 2500 ರು.ಗಿಂತ ಹೆಚ್ಚಿನ ಬಾಡಿಗೆ ಇರುವ ವಾಣಿಜ್ಯ ಮಳಿಗೆಗಳಿಗೂ ಜಿ ಎಸ್ ಟಿ ಜಾರಿ
 
-ವಸತಿ ಉದ್ದೇಶಕ್ಕಾಗಿ ಉದ್ಯಮ  ಸಂಸ್ಥೆಗಳು,  ವಸತಿ ಕಟ್ಟಡಗಳನ್ನು ಬಾಡಿಗೆಗಾಗಿ ನೀಡಿದ್ದರೆ ಅದಕ್ಕೆ ಈವರೆಗೆ ಪದ್ದ ವಿನಾಯಿತಿ ರದ್ದು
 
-ಬ್ಲಡ್‌ ಬ್ಯಾಂಕ್‌ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯ್ತಿ ರದ್ದು 
 
 ಪ್ರತಿಯೊಂದು ವಸ್ತುವಿನ ಬೆಲೆ ದುಬಾರಿಯಾಗಿದೆ. ಇನ್ನು ಸೋಮವಾರದಿಂದ ಎಲ್ಲ ವಸ್ತುಗಳ ಬೆಲೆ ಇನ್ನಷ್ಟು ಗಗನಕ್ಕೇರಲಿದೆ. ಹೀಗಾಗಿ ಜನರು ಕಂಗಾಲಾಗಿದ್ದು, ಅಸಾಮಾಧಾನ ಹೊರಹಾಕ್ತಿದ್ದಾರೆ. ಬರುವ ಸಂಬಳ ಮಾತ್ರ ಕಡಿಮೆ . ಆದ್ರೆ ಎಲ್ಲದರ ಬೆಲೆ ನಿರಂತರವಾಗಿ ಏರಿಕೆಯಾಗ್ತಿದೆ. ಹೀಗೆ ಆದ್ರೆ ಹೇಗೆ ಜೀವನ ನಡೆಸುವುದು ಎಂದು ಜನರು ಚಿಂತಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆಕ್ರೋಶಗೊಂಡ ಜನರು ಸರ್ಕಾರದ ನಿರ್ಧಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ. ಸೋಮವಾರದಿಂದ ಎಲ್ಲದರ ದರ ಏರಿಕೆಯಾಗಲಿದ್ದು, ಜನರು ಏನುಮಾಡಲಾದ ಸ್ಥಿತಿ ತಲುಪಿದ್ದಾರೆ. ಇನ್ನು ಕೇಂದ್ರ ಸರ್ಕಾರದ ನಿರ್ಧಾರದಿಂದ ಶ್ರೀಸಾಮಾನ್ಯರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರದ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಆಸ್ಪತ್ರೆಯವರು