ಬಲ್ಲಿಯಾ: ಡ್ಯಾನ್ಸರ್‌ವೊಬ್ಬಳ ಜತೆ 70 ವರ್ಷದ ಬಿಜೆಪಿ ನಾಯಕ ಬಬ್ಬನ್ ಸಿಂಗ್ ರಘುವಂಶಿ ಅವರು ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಈ ವಿಡಿಯೋ ಹರಿದಾಡಿತ್ತು, ವಿಡಿಯೋ ನಕಲಿ ಎಂದು ಬಿಜೆಪಿ ಮುಖಂಡ ಆರೋಪಿಸಿದ್ದಾರೆ.
ಈ ವಿಡಿಯೋ ಮದುವೆ ಕಾರ್ಯಕ್ರಮದಲ್ಲಿ ನರ್ತಕಿ ಬಿಜೆಪಿ ನಾಯಕನ ಮಡಿಲಲ್ಲಿ ಕುಳಿತಿರುವುದು ಕಂಡು ಬರುತ್ತದೆ. ಈ ವೇಲೆ ಅವಳನ್ನು ಅನುಚಿತವಾಗಿ ಸ್ಪರ್ಶಿಸಿ, ಚುಂಬಿಸುತ್ತಿರುವುದನ್ನು ಕಾಣಬಹುದು.
ರಾಸ್ರಾದ ಕಿಸಾನ್ ಕೋಆಪರೇಟಿವ್ ಮಿಲ್‌ನ ಉಪಾಧ್ಯಕ್ಷ ರಘುವಂಶಿ ಅವರು ವೀಡಿಯೊವನ್ನು ನಕಲಿ ಎಂದು ತಳ್ಳಿಹಾಕಿದ್ದಾರೆ ಮತ್ತು ಕೆಲವು ಪಕ್ಷದ ಸದಸ್ಯರು ತಮ್ಮ ಮಾನಹಾನಿ ಮಾಡಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
"ನಾನು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನಗೆ 70 ವರ್ಷ. 20 ದಿನಗಳ ಹಿಂದೆ ನಡೆದ ಈ ಮದುವೆಗೆ ಹಾಜರಾಗಲು ನಾನು ಹೋಗಿದ್ದೆ ಎಂದು ಒಪ್ಪಿಕೊಳ್ಳುತ್ತೇನೆ. ನಾನು ನರ್ತಕಿಗೆ ಹಣವನ್ನೂ ನೀಡಿದ್ದೇನೆ. ಆದರೆ ನಾನು ಯಾವುದೇ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿಲ್ಲ" ಎಂದು ಬಿಜೆಪಿ ನಾಯಕ ಸುದ್ದಿಗಾರರಿಗೆ ತಿಳಿಸಿದರು.
"ಇದು ನನ್ನ ಇಮೇಜ್‌ಗೆ ಧಕ್ಕೆ ತರುವ ಉದ್ದೇಶಪೂರ್ವಕ ಪಿತೂರಿಯಾಗಿದೆ. ವೀಡಿಯೊವನ್ನು ನಿರ್ಮಿಸಲಾಗಿದೆ. ಶಾಸಕ ಕೇತಕೀ ಸಿಂಗ್ ಅವರ ಕುಟುಂಬದ ಸದಸ್ಯರು ಇದರ ಹಿಂದೆ ಇದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
ಕೇತಕೀ ಸಿಂಗ್ ಅವರು ಬನ್ಸ್ದಿಹ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.