Select Your Language

Notifications

webdunia
webdunia
webdunia
Friday, 11 April 2025
webdunia

ತೀರ್ಥಹಳ್ಳಿಯಲ್ಲಿ ಬಿ ಫಾರ್ಮ್​ ಗೊಂದಲ!

B form confusion in Tirthahalli
ಶಿವಮೊಗ್ಗ , ಶನಿವಾರ, 15 ಏಪ್ರಿಲ್ 2023 (15:49 IST)
ಶಿವಮೊಗ್ಗದ ತೀರ್ಥಹಳ್ಳಿ ಕೇತ್ರದ BJP ಬಿ ಫಾರಂ ಗೊಂದಲ ಮೂಡಿದ್ದು, ನವೀನ್ ಹೆದ್ದೂರ್​ಗೆ BJP ಬಿ ಫಾರಂ ನೀಡಿದೆ ಎಂದು ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಶೇರ್ ಆಗುತ್ತಿದ್ದಂತೆ ಕೆಲಕಾಲ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು.. ಬಿಜೆಪಿಯ ವಾಟ್ಸ್ಆ್ಯಪ್ ಗುಂಪುಗಳಲ್ಲೇ ಫೋಟೋ ವೈರಲ್ ಆಗಿದ್ದು, ಗೊಂದಲಕ್ಕೆ ಕಾರಣವಾಗಿತ್ತು. BJP ಶಿವಮೊಗ್ಗ ವಿಭಾಗ ಪ್ರಭಾರಿ ಗಿರೀಶ್ ಪಟೇಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ T.D. ಮೇಘರಾಜ್ ಬಿ ಫಾರಂ ನೀಡುವ ಫೋಟೋ ವೈರಲ್ ಆಗಿತ್ತು. ಅಸಲಿಗೆ ಹೆದ್ದೂರು ನವೀನ್ ಮೂಲಕ ಗೃಹ ಮಂತ್ರಿ ಆರಗ ಜ್ಞಾನೇಂದ್ರಗೆ ಬಿ ಫಾರಂ ನೀಡಲಾಗಿತ್ತು.. ಆರಗ ಜ್ಞಾನೇಂದ್ರ ಪ್ರತಿನಿಧಿಯಾಗಿ ಹೆದ್ದೂರು ನವೀನ್ ಕೈಗೆ ಬಿ ಫಾರಂ ನೀಡಲಾಗಿತ್ತು.. ಇದನ್ನೇ ಸಾಮಾಜಿಕ ಜಾಲತಾಣದಲ್ಲಿ ನವೀನ್​ಗೆ ಬಿ ಫಾರಂ ನೀಡಲಾಗಿದೆ ಎಂದು ವೈರಲ್​ ಮಾಡಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ T.D. ಮೇಘರಾಜ್, ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಬಿ ಫಾರಂ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ವಿವಿಧ ಭಾಗಗಳಲ್ಲಿ ಮತಯಾಚನೆ ಮಾಡಿದ ಅಶ್ವಥ್ ನಾರಾಯಣ್