Select Your Language

Notifications

webdunia
webdunia
webdunia
webdunia

ನಕಲಿ ಔಷಧ : 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು!

ನಕಲಿ ಔಷಧ : 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು!
ನವದೆಹಲಿ , ಭಾನುವಾರ, 16 ಏಪ್ರಿಲ್ 2023 (14:47 IST)
ನವದೆಹಲಿ : ನಕಲಿ ಔಷಧಗಳನ್ನು ತಯಾರಿಸುತ್ತಿದ್ದ ಆರೋಪದ ಮೇಲೆ 18 ಫಾರ್ಮಾ ಕಂಪನಿಗಳ ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆ ರದ್ದುಗೊಳಿಸಿದೆ.
 
20 ರಾಜ್ಯಗಳ 76 ಕಂಪನಿಗಳ ಮೇಲೆ ತಪಾಸಣೆ ನಡೆಸಿದ ನಂತರ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ. ಅಲ್ಲದೆ ಹಿಮಾಚಲ ಪ್ರದೇಶದ 70, ಉತ್ತರಾಖಂಡ್ನ 45 ಮತ್ತು ಮಧ್ಯಪ್ರದೇಶದ 23 ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಕ್ರಮ ಕೈಗೊಳ್ಳಲಾಗಿರುವ ಹೆಚ್ಚಿನ ಕಂಪನಿಗಳು ನೋಂದಣಿಯಾಗಿವೆ. ಡೆಹ್ರಾಡೂನ್ನಲ್ಲಿ ನೋಂದಾಯಿಸಲಾದ ಹಿಮಾಲಯ ಮೆಡಿಟೆಕ್ ಪ್ರೈವೇಟ್ ಲಿಮಿಟೆಡ್ನ ಪರವಾನಗಿಯನ್ನು 2022ರ ಡಿ.30 ರಂದು ಅಮಾನತುಗೊಳಿಸಲಾಗಿತ್ತು. 12 ಉತ್ಪನ್ನಗಳನ್ನು ತಯಾರಿಸಲು ನೀಡಿದ್ದ ಅನುಮತಿಯನ್ನು 2023ರ ಫೆ.7 ರಂದು ರದ್ದುಗೊಳಿಸಲಾಗಿತ್ತು.

ಈ ಹಿಂದೆ ಹಿಮಾಚಲ ಪ್ರದೇಶದ ಶ್ರೀ ಸಾಯಿ ಬಾಲಾಜಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಿ, ಔಷಧಗಳ ತಯಾರಿಕೆ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಪರಿಶೀಲನೆಯ ನಂತರ ಹಿಂದಿನ ಆದೇಶವನ್ನು ರದ್ದುಗೊಳಿಸಲಾಗಿತ್ತು.

ಅಲ್ಲದೆ ಇಜಿ ಫಾರ್ಮಾಸ್ಯುಟಿಕಲ್ಸ್, ವಿಲ್ ಮಂಡಲ, ತೆಹ್ ಕಸೌಲಿ, ಡಿಸ್ಟ್ ಸೋಲನ್ ಸಂಸ್ಥೆಗಳಿಗೂ ನೋಟಿಸ್ ನೀಡಲಾಗಿತ್ತು. ಪರಿಶೀಲನೆಯ ನಂತರ ಉತ್ಪಾದನೆ ನಿಷೇಧಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಅಥೆನ್ಸ್ ಲೈಫ್ ಸೈನ್ಸಸ್ ಕಂಪನಿಗೂ ಸಹ ಎಚ್ಚರಿಕೆಯನ್ನು ನೀಡಲಾಗಿತ್ತು.

ಹಿಮಾಚಲದ ಸೋಲನ್ನ ಜಿಎನ್ಬಿ ಮೆಡಿಕಾ ಲ್ಯಾಬ್ಗೆ ಮಾತ್ರೆಗಳು, ಕ್ಯಾಪ್ಸುಲ್ಗಳು, ಕೆಮ್ಮಿನ ಔಷಧಿಗಳು, ಚುಚ್ಚುಮದ್ದು ಮತ್ತು ಪ್ರೋಟಿನ್ ಪೌಡರ್ ಉತ್ಪಾದನೆಯನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ. ಕಂಪನಿಯ ಔಷಧಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರ ಜನರ ಹಣ ಕದ್ದಿದೆ : ರಾಹುಲ್ ಗಾಂಧಿ