Publish Date: Wed, 04 Oct 2017 (08:54 IST)
Updated Date: Wed, 04 Oct 2017 (08:56 IST)
ಲಕ್ನೋ: ವಿವಾದಿತ ಹೇಳಿಕೆಗಳನ್ನೇ ನೀಡುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತೊಮ್ಮೆ ತಮ್ಮ ಹುಳುಕು ನಾಲಿಗೆ ಹರಿಯಬಿಟ್ಟಿದ್ದಾರೆ.
ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಧ್ವಂಸಗೊಳಿಸಿದರೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ಮಾಜಿ ಸಚಿವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕೆಂಪುಕೋಟೆ, ತಾಜ್ ಮಹಲ್, ಕುತುಬ್ ಮೀನಾರ್ ದೇಶದ ಹೆಮ್ಮೆಯ ಸ್ಮಾರಕಗಳು ಎಂದೇ ನಾವು ಪರಿಗಣಿಸುತ್ತೇವೆ. ಆದರೆ ಅಜಂ ಖಾನ್ ಪ್ರಕಾರ ಇದೆಲ್ಲಾ ಗುಲಾಮಗಿರಿಯ ಸಂಕೇತವಂತೆ. ರಾಜ್ಯದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್ ಮಹಲ್ ಹೆಸರು ಕೈ ಬಿಟ್ಟು ಸಿಎಂ ಯೋಗಿ ಸರ್ಕಾರ ಎಡವಟ್ಟು ಮಾಡಿದ ಬೆನ್ನಲ್ಲೇ ಅಜಂ ಖಾನ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ