Publish Date: Sat, 30 Sep 2017 (07:35 IST)
Updated Date: Sat, 30 Sep 2017 (07:37 IST)
ಲಕ್ನೋ: ಮ್ಯಾನ್ಮಾರ್ ನಿಂದ ಭಾರತಕ್ಕೆ ವಲಸೆ ಬಂದಿರುವ ರೊಹಿಂಗ್ಯಾ ಮುಸ್ಲಿಮರು ಉಗ್ರರು. ಅವರು ಸಂತ್ರಸ್ತರಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
‘ಕೇಂದ್ರ ಸರ್ಕಾರ ರೊಹಿಂಗ್ಯಾ ಮುಸ್ಲಿಮರ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿಯಾಗಿಯೇ ಇದೆ. ಭಾರತಕ್ಕೆ ವಲಸೆ ಬಂದಿರುವ ಇವರ ಮೇಲೆ ಕರುಣೆ ತೋರಬೇಕಾದ ಅಗತ್ಯವಿಲ್ಲ. ಮ್ಯಾನ್ಮಾರ್ ನಲ್ಲಿ ನೂರಾರು ಹಿಂದೂಗಳನ್ನು ಇವರು ಮಾರಣ ಹೋಮ ಮಾಡಿದ್ದಾರೆ’ ಎಂದು ಸಿಎಂ ಯೋಗಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಮ್ಯಾನ್ಮಾರ್ ನಿಂದ ವಲಸೆ ಬಂದಿರುವ ರೊಹಿಂಗ್ಯಾ ಮುಸ್ಲಿಮರ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಇವರು ದೇಶದ ಭದ್ರತೆಗೆ ಅಪಾಯಕಾರಿಯಾಗಿರುವ ಹಿನ್ನಲೆಯಲ್ಲಿ ಗಡೀಪಾರು ಮಾಡಬೇಕೆಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ