ಪ್ರೇಮಿಗಳೇ ಎಚ್ಚರ! ವಿಚಿತ್ರ ಘಟನೆ

Webdunia
ಗುರುವಾರ, 4 ನವೆಂಬರ್ 2021 (09:52 IST)
ಉತ್ತರ ಪ್ರದೇಶದ  ಮೀರತ್ ನಲ್ಲಿ ಇಬ್ಬರು ಯುವಕರನ್ನು ಬೆತ್ತಲೆಗೊಳಿಸಿ ಹುಡುಗಿಯೊಂದಿಗೆ ಅಶ್ಲೀಲ ರೀತಿಯಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಡಿಯೋ ಇಟ್ಟುಕೊಂಡು ಮೂರು ಲಕ್ಷ ರು.  ಆರೋಪಿಗಳು ಬೇಡಿಕೆ ಇಡಲು ಮುಂದಾಗಿದ್ದರು.  ಜಿಲ್ಲೆಯ ಖರ್ಖೌಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರು ಮಂದಿ ಯುವಕರು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.
ಗನ್ ತೋರಿಸಿ ಭಯ  ಹುಟ್ಟಿಸಿದ ತಂಡ ಯುವಕರಿಂದ ಮೊಬೈಲ್ ಫೋನ್ ಮತ್ತು 32,000 ರೂ ನಗದು ದೋಚಿದೆ. ಸಂತ್ರಸ್ತರು   ಖರ್ಖೌಡಾ ಪೊಲೀಸರಿಗೆ ದೂರು ನೀಡಿದ್ದು ಭಾನುವಾರ ರಾತ್ರಿ ಲೋಹಿಯಾನಗರ ಮಂಡಿಯಲ್ಲಿ ಪಾರ್ಟಿ ಕೊಡಿಸುವ ನೆಪದಲ್ಲಿ ಆರು ಮಂದಿ ನಮ್ಮನ್ನು ಕರೆದುಕೊಂಡು ಹೋಗಿದ್ದರು ಎಂದು ಜುಬೇರ್ ಮತ್ತು ಆತನ ಸ್ನೇಹಿತ ಶಹಬಾಜ್ ದೂರಿನಲ್ಲಿ ಆರೋಪಿಸಿದ್ದಾರೆ.
ಮೂರು ಲಕ್ಷ ರು. ನೀಡಲು ಒಪ್ಪಿಕೊಂಡ ಮೇಲೆ ತಂಡ ಅಲ್ಲಿಂದ ಜಾಗ ಖಾಲಿ ಮಾಡಿದೆ.  ಮೊಲದಲಿಗೆ ಪೊಲೀಸರ ಬಳಿ ಹೋದಾಗ ಪೊಲೀಸರೇ  ಆರೋಪಿಗಳ ಪರ ನಿಂತು ಕಾಂಪ್ರಮೈಸ್ ಮಾಡಿಕೊಂಡಿ ಎಂದಿದ್ದಾರೆ ಎನ್ನುವ ಆರೋಪವನ್ನು ಸಂತ್ರಸ್ತರು ಮಾಡಿದ್ದಾರೆ. ಪೊಲೀಸ್ ಇಲಾಖೆಯಿಂದ ಯಾವ ತಪ್ಪು ಹೆಜ್ಜೆಯೂ ಆಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಇನ್ಸ್ ಪೆಕ್ಟರ್ ಸಂಜಯ್ ಶರ್ಮಾ ತಿಳಿಸಿದ್ದಾರೆ.
ಪ್ರೇಮಿಗಳ ಟಾರ್ಗೆಟ್
ಹೊಸಕೋಟೆ ತಾ. ಹಂದೇನಹಳ್ಳಿಯ ಲೇಔಟ್ನಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳನ್ನು ಕಾಡುತ್ತಿದ್ದ ತಂಡದ ಕೃತ್ಯವೂ ವರದಿಯಾಗಿತ್ತು. ಏಕಾಂತದಲ್ಲಿದ್ದ ಯುವಕ-ಯುವತಿಯ ವಿಡಿಯೋ ಮಾಡಿ, 5 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದು ಪ್ರಕರಣ ದಾಖಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಂಗಾ ನದಿಗೆ ನಾನ್ ವೆಜ್ ಬಿರಿಯಾನಿ ತಂದು ಸುರಿಯುತ್ತಿದ್ದ ವ್ಯಕ್ತಿಗಳ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು Video

ಕಾಕ್ರೋಚ್ ಜನತಾ ಪಾರ್ಟಿಎಂದರೆ ಏನು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಇದರ ಹಿಂದೆ ಯಾರಿದ್ದಾರೆ

ಸಿಎಂ ಬದಲಾವಣೆ ವಿಚಾರ: ಡಿಕೆ ಶಿವಕುಮಾರ್ ಮಹತ್ವದ ತೀರ್ಮಾನ

Karnataka Weather: ರಾಜ್ಯದ ಈ ಜಿಲ್ಲೆಗಳಿಗೆ ಇಂದು ಭಾರೀ ಮಳೆ ನಿರೀಕ್ಷೆ

ಸೋಲಿನ ಭಯದಿಂದ ಜಿಬಿಎ ಚುನಾವಣೆ ಮುಂದೂಡುವ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments