ಒಂದೇ ವೇದಿಕೆ, ಒಂದೇ ಸಮಯ..ಇಬ್ಬರ ಹೆಂಡಿರ ಮುದ್ದಿನ ಗಂಡನ ವಿವಾಹ

Webdunia
ಶುಕ್ರವಾರ, 7 ಜೂನ್ 2019 (17:26 IST)
ಅಟೋ ಚಾಲಕನಿಗೆ ಒಂದೇ ದಿನ ಇಬ್ಬರು ಯುವತಿಯರೊಂದಿಗೆ ವಿವಾಹವಾಗಿರುವುದು ಪ್ರತಿಯೊಬ್ಬರಿಗು ಅಚ್ಚರಿ ಮೂಡಿಸಿದೆ. ಹಣವಿದ್ದವರು ಕೂಡಾ ಒಂದೇ ಹೆಂಡತಿಯನ್ನು ಸಾಕಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಅಟೋ ಚಾಲಕನ ಧೈರ್ಯ ಮೆಚ್ಚಬೇಕಾದುದ್ದೆ.
ತಮಿಳುನಾಡಿನ ತಿರುಪುರ್ ಜಿಲ್ಲೆಯ ತಾರಾಪುರ ಹತ್ತಿರವಿರುವ ಪುದುಕೊಟ್ಟೆಮೆಡು ಗ್ರಾಮದ ನಿವಾಸಿಯಾಗಿರುವ ಅಟೋ ಚಾಲಕ, ಪ್ರತಿನಿತ್ಯ ತನ್ನ ಅಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಪ್ರೇಮಿಸಿದ್ದಾನೆ. ಕಳೆದ ತಿಂಗಳು 29 ರಂದು ಯುವತಿ ಕಾಣೆಯಾಗಿದ್ದಾಳೆ. ಯುವತಿಯ ಪೋಷಕರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ತಾರಾಪುರ ಪಟ್ಟಣದಲ್ಲಿರುವ ಅಟೋ ಚಾಲಕನೊಂದಿಗೆ ಯುವತಿಯಿದ್ದಾಳೆ ಎನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಸುಳಿವು ಆಧರಿಸಿ ಪೊಲೀಸರು ಅಟೋ ಚಾಲಕನಿದ್ದ ಗ್ರಾಮಕ್ಕೆ ತೆರಳಿದ್ದಾರೆ.ಅಲ್ಲಿಗೆ ಹೋದ ಪೊಲೀಸರಿಗೆ ಶಾಕ್ ಆಗಿದೆ.
 
ಇದರಲ್ಲಿ ಶಾಕ್ ಆಗುವಂತಹ ವಿಷಯ ಏನಿದೆ? ಎಂದುಕೊಂಡಿರಾ? ಹೌದು ಇದೆ, ಅಟೋ ಚಾಲಕ ಇಬ್ಬರು ಯುವತಿಯರನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿಯೇ ವಿವಾಹವಾಗಿದ್ದಾನೆ. 
 
ಅದಲ್ಲದೇ ಅಟೋ ಚಾಲಕನೊಂದಿಗೆ ಜೀವನ ಸಾಗಿಸ್ತೇವೆ. ಆತನ ಜೊತೆಗೆ ಇರುತ್ತೇವೆ ಎನ್ನುವ ಇಬ್ಬರು ಪತ್ನಿಯರ ಮಾತುಗಳನ್ನು ಕೇಳಿ ಪೊಲೀಸರು ದಂಗಾಗಿದ್ದಾರೆ. ಕೌನ್ಸಿಲಿಂಗ್ ಮಾಡಿದರೂ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರನ್ನು ಅಟೋ ಚಾಲಕನ ಹತ್ತಿರ ಕಳುಹಿಸುವಂತಹ ಪರಿಸ್ಥಿತಿ ಪೊಲೀಸರಿಗೆ ಎದುರಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೆಡ್ಡಿಗಳ ನಡುವಿನ ಜಗಳ: ನಾಯಕನ ಪರ ನಿಂತು ಪ್ರಾಣ ಕಳೆದುಕೊಂಡಿದ್ದು ಮಾತ್ರ ಕಾರ್ಯಕರ್ತ

ಜನಾರ್ದನ ರೆಡ್ಡಿಯವರಿಗೆ ಭದ್ರತಾ ವ್ಯವಸ್ಥೆ ನೀಡಿ: ಸುಧಾಕರ ರೆಡ್ಡಿ ಆಗ್ರಹ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ರಾಜೀವ್ ಗಾಂಧಿ ವಸತಿ ಯೋಜನೆ ಮುಖಾಂತರ ಮನೆಗಾಗಿ ಅರ್ಜಿ ಹಾಕುವುದು ಹೇಗೆ

ಮುಂದಿನ ಸುದ್ದಿ
Show comments