Webdunia - Bharat's app for daily news and videos

Install App

ಮೋದಿ ವಾಜಪೇಯಿಯವರಿಗೆ ಸರಿಸಾಟಿಯಲ್ಲ : ಆಡ್ವಾನಿ

Webdunia
ಮಂಗಳವಾರ, 19 ಡಿಸೆಂಬರ್ 2023 (11:00 IST)
ಭಾರತದ ಇತಿಹಾಸದಲ್ಲಿ ವಾಜಪೇಯಿಯಂತಹ ಪ್ರಧಾನಿಯನ್ನು ನಾವು ಕಂಡಿಲ್ಲ. ವಾಜಪೇಯಿಯವರು ಪಡೆದ ಗೌರವ ನಮ್ಮ ಕಲ್ಪನೆಗೆ ನಿಲುಕದ್ದಲ್ಲ ಎಂದ ಅವರು ಏನೇ ಆದರೂ ಮೋದಿ ವಾಜಪೇಯಿಯವರಿಗೆ ಸರಿಸಾಟಿಯಲ್ಲ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.
 
ಪ್ರಧಾನಿಯಾಗಿ ನರೇಂದ್ರ ಮೋದಿಯವರ ಕಾರ್ಯದ ಬಗ್ಗೆ ಯಥೇಚ್ಛ ಮೆಚ್ಚುಗೆ ವ್ಯಕ್ತಪಡಿಸಿರುವ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ,  ಏನೇ ಆಗಲಿ ದೇಶ ಅಟಲ್ ಬಿಹಾರಿಯಂತಹ ಸರ್ವಶ್ರೇಷ್ಠ ಪ್ರಧಾನಿಯನ್ನು ಮಾತ್ರ ಕಂಡಿಲ್ಲ ಎಂದು ಹೇಳಿದ್ದಾರೆ. 
 
ಅಹಮದಾಬಾದಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಆಡ್ವಾಣಿ, ಪ್ರಧಾನಿಯಾಗಿ ನರೇಂದ್ರ ಮೋದಿ ತೋರಿಸುತ್ತಿರುವ ಸಾಮರ್ಥ್ಯದ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ನರೇಂದ್ರ ಭಾಯಿಯವರು  ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಇಡೀ ದೇಶದ ಮೆಚ್ಚುಗೆ ಗಳಿಸಿದ್ದಾರೆ ಎಂಬುದನ್ನು ನಾನು ಅಭಿಮಾನ ಪೂರ್ವಕವಾಗಿ ಹೇಳುತ್ತೇನೆ ಎಂದರು.
 
"ಪ್ರಧಾನ ಮಂತ್ರಿಯಾಗಿ,ಪರಿಣಾಮಕಾರಿಯಾಗಿ ದೇಶವನ್ನು ಆಳ್ವಿಕೆ ನಡೆಸುವ ಸಾಮರ್ಥ್ಯವಷ್ಟೇ ಸಾಕಾಗುವುದಿಲ್ಲ.ಇತರ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸುವ ಅಗತ್ಯವಿರುತ್ತದೆ. ಚುನಾವಣೆಯಲ್ಲಿ ಜನರ ವಿಶ್ವಾಸವನ್ನು ಗೆದ್ದ ಮೋದಿಯವರು ಈಗ ಇಡೀ ವಿಶ್ವದ ವಿಶ್ವಾಸವನ್ನು ಗೆದ್ದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. 
 
ನರೇಂದ್ರ ಮೋದಿ ಚುನಾವಣೆಯನ್ನು ಗೆದ್ದಾಗ ಮುಂದೇನಾಗುವುದು, ಇತರರೊಂದಿಗಿನ ಸಂಬಂಧಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆ  ಕಾಡುತ್ತಿತ್ತು. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ಹೆಗಲಿಗೇರಿಸಿಕೊಂಡರು. ಅವರಷ್ಟೇ ಅಲ್ಲ, ಅವರು ಜವಾಬ್ದಾರಿಗಳನ್ನು ಹಂಚಿದ್ದ ಇತರರು ಕೂಡ ಅತ್ಯುತ್ತಮ ಕೆಲಸವನ್ನು ಮಾಡಿದ್ದಾರೆ. ಮೋದಿ ವಿಷಯದಲ್ಲಿ ನನಗೆ ತುಂಬಾ ಸಂತೋಷವಾಗಿದೆ 'ಎಂದು ಆಡ್ವಾಣಿ ಹೇಳಿದ್ದಾರೆ.
 
ಬಿಜೆಪಿ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ಮೋದಿಯನ್ನು ನಿಯೋಜಿದ್ದನ್ನು ಮತ್ತು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಅವರನ್ನು ಘೋಷಿಸಿದ್ದನ್ನು ಆಡ್ವಾಣಿ ವಿರೋಧಿಸಿದ್ದರು. ಆದರೆ ನಂತರ ಅನೇಕ ಸಂದರ್ಭಗಳಲ್ಲಿ ಅವರು ಮೋದಿಯನ್ನು ಪ್ರಶಂಸಿದ್ದರು. 
 
 ಪಕ್ಷದ ಕಾರ್ಯಕರ್ತರು ಬಿಜೆಪಿ ಮತ್ತು ಆರೆಸ್ಸೆಸ್ ನ ಇತಿಹಾಸದ ಅರಿವನ್ನು ಹೊಂದಿರಬೇಕು ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ, ನಾನಾಜೀ ದೇಶ್‌ಮುಖ್, ಕುಶಬಾಹು ಠಾಕ್ರೆಯಂತಹ ನಾಯಕರ ಕೊಡುಗೆ ಮರೆಯಬಾರದು ಎಂದು ಆಡ್ವಾಣಿ ಸಲಹೆ ನೀಡಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಕಸದಲ್ಲಿ ಶಿಶುವಿನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಅಪ್ರಾಪ್ತೆಗೆ ಗರ್ಭಪಾತ ಮಾಡಿಸಿದ್ದ ಆಟೊ ಚಾಲಕ ಅಂದರ್‌

ಜಮ್ಮು ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಜನರು ತತ್ತರ: ಹಲವು ಮನೆಗಳು ಧ್ವಂಸ, ಐವರು ಸಾವು

‌ಮುಂದಿನ ಒಂದು ವಾರ ರಾಜ್ಯದಲ್ಲಿ ಗುಡುಗು ಸಹಿತ ಮಳೆ: 24 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಣೆ

ಐ ಬ್ರೊ ಮಾಡಿಸಿಕೊಳ್ಳಲು ಪಾರ್ಲರ್‌ಗೆ ಹೋಗಿದ್ದ ಪತ್ನಿಯ ಜಡೆಯನ್ನೇ ಕತ್ತರಿಸಿದ ಪಾಪಿ ಪತಿ

ಮುಂದಿನ ಸುದ್ದಿ
Show comments