Select Your Language

Notifications

webdunia
webdunia
webdunia
webdunia

ಜಡ್ಜ್ ಆಗಿ ನ್ಯಾ. ಅರವಿಂದ್ ಕುಮಾರ್, ನ್ಯಾ. ರಾಜೇಶ್ ಬಿಂದಾಲ್ ಪ್ರಮಾಣ ವಚನ ಸ್ವೀಕಾರ

ಜಡ್ಜ್ ಆಗಿ ನ್ಯಾ. ಅರವಿಂದ್ ಕುಮಾರ್, ನ್ಯಾ. ರಾಜೇಶ್ ಬಿಂದಾಲ್ ಪ್ರಮಾಣ ವಚನ ಸ್ವೀಕಾರ
ನವದೆಹಲಿ , ಸೋಮವಾರ, 13 ಫೆಬ್ರವರಿ 2023 (18:52 IST)
ನವದೆಹಲಿ : ನ್ಯಾ. ಅರವಿಂದ್ ಕುಮಾರ್, ನ್ಯಾ. ರಾಜೇಶ್ ಬಿಂದಾಲ್ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಇಬ್ಬರು ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.

ಇಬ್ಬರು ನ್ಯಾಯಾಧೀಶರ ನೇಮಕದಿಂದ ಸದ್ಯ ಸುಪ್ರೀಂಕೋರ್ಟ್ ನಲ್ಲಿ ಪೂರ್ಣ ಪ್ರಮಾಣ (34) ನ್ಯಾಯಾಧೀಶರ ಹುದ್ದೆ ಭರ್ತಿಯಾಗಿದೆ.

ಹಾಸನ ಮೂಲದ ನ್ಯಾ.ಅರವಿಂದ್ ಕುಮಾರ್ ಅವರನ್ನು ಜೂನ್ 2009 ರಲ್ಲಿ ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು, ಡಿಸೆಂಬರ್ 2012 ರಲ್ಲಿ ಖಾಯಂ ನ್ಯಾಯಾಧೀಶರಾಗಿ ದೃಢೀಕರಿಸಲಾಯಿತು. ಅಕ್ಟೋಬರ್ 2021 ರಲ್ಲಿ ಗುಜರಾತ್ನ ಗುಜರಾತ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲ್ಪಟ್ಟರು.

ನ್ಯಾ.ರಾಜೇಶ್ ಬಿಂದಾಲ್ ಅವರನ್ನು ಮಾರ್ಚ್ 2006 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಿಸಲಾಯಿತು ಬಳಿಕ ಅಕ್ಟೋಬರ್ 2021 ರಲ್ಲಿ ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು.


Share this Story:

Follow Webdunia kannada

ಮುಂದಿನ ಸುದ್ದಿ

ಕೆ-ಸೆಟ್ ಪರೀಕ್ಷೆಗಳನ್ನು ಕೆಇಎ ನಡೆಸಲಿದೆ: ಅಶ್ವಥ್ ನಾರಾಯಣ