Select Your Language

Notifications

webdunia
webdunia
webdunia
webdunia

ಕೆ-ಸೆಟ್ ಪರೀಕ್ಷೆಗಳನ್ನು ಕೆಇಎ ನಡೆಸಲಿದೆ: ಅಶ್ವಥ್ ನಾರಾಯಣ

ಕೆ-ಸೆಟ್ ಪರೀಕ್ಷೆಗಳನ್ನು ಕೆಇಎ ನಡೆಸಲಿದೆ: ಅಶ್ವಥ್ ನಾರಾಯಣ
ಬೆಂಗಳೂರು , ಸೋಮವಾರ, 13 ಫೆಬ್ರವರಿ 2023 (17:55 IST)
ಬೆಂಗಳೂರು : ಕೆ-ಸೆಟ್ ಪರೀಕ್ಷೆಗಳನ್ನು ಇನ್ನು ಮುಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗುತ್ತದೆ ಅಂತ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಮಧು ಮಾದೇಗೌಡ ಪ್ರಶ್ನೆ ಕೇಳಿದರು. ಕೆ-ಸೆಟ್ ಪರೀಕ್ಷೆಗಳನ್ನ ವಿಶ್ವವಿದ್ಯಾಲಯಗಳು ಮಾಡುವ ನಿಯಮ ಸರ್ಕಾರ ಕೈಬಿಟ್ಟಿದೆ. ಈ ನಿರ್ಧಾರ ಸರ್ಕಾರ ವಾಪಸ್ ಪಡೆದು ಕೆ-ಸೆಟ್ ಪರೀಕ್ಷೆಗಳನ್ನ ವಿಶ್ವವಿದ್ಯಾಲಯಗಳೇ ನಡೆಸಲು ಅವಕಾಶ ಮಾಡಿಕೊಡಬೇಕು.

ಪರೀಕ್ಷೆ ನಡೆಸಲು ಕಮಿಟಿ ಮಾಡಿ ಕೆಇಎ ಮೂಲಕ ಕೆ-ಸೆಟ್ ಪರೀಕ್ಷೆ ಮಾಡ್ತೀವಿ. ಯೂಜಿಸಿಯ ಗಮನಕ್ಕೂ ಇದನ್ನ ತರಲಾಗಿದೆ ಎಂದರು. ಕೆಇಎ ಅತ್ಯುತ್ತಮ ಸಂಸ್ಥೆ. ಯಾವುದೇ ದೊಡ್ಡ ಆರೋಪ ಇಲ್ಲ. ಪಾರದರ್ಶಕವಾಗಿ ಕೆಇಎ ಪರೀಕ್ಷೆ ಮಾಡುತ್ತೆ. ಹೀಗಾಗಿ ಕೆ-ಸೆಟ್ ಪರೀಕ್ಷೆ ಕೆಇಎ ಮೂಲಕ ಇನ್ನು ಮುಂದೆ ಮಾಡ್ತೀವಿ ಅಂತ ಸಚಿವರು ಸ್ಪಷ್ಟಪಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯಕ್ಕೆ ವಿದ್ಯುತ್ ದರ ಏರಿಕೆ ಇಲ್ಲ: ಸುನಿಲ್ ಕುಮಾರ್