Publish Date: Sun, 06 Dec 2020 (06:59 IST)
Updated Date: Sun, 06 Dec 2020 (07:01 IST)
ಗುರುಗ್ರಾಮ : 22 ವರ್ಷದ ವ್ಯಕ್ತಿಯೊಬ್ಬ ಸತತ 3 ರಾತ್ರಿಗಳಲ್ಲಿ ಮೂರು ಜನರನ್ನು ಕೊಲೆ ಮಾಡಿ ಲೂಟಿ ಮಾಡಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಆರೋಪಿ ಗುರುಗ್ರಾಮದ ಅತಿಥಿ ಗೃಹವೊಂದರಲ್ಲಿ ಕೆಲಸ ಮಾಡುತ್ತಿದ್ದು, ಆನಂತರ ನಿರುದ್ಯೋಗಿಯಾಗಿದ್ದ. ಈ ಹಿನ್ನಲೆಯಲ್ಲಿ ಆತ ಹಣಕ್ಕಾಗಿ ವ್ಯಕ್ತಿಯೊಬ್ಬರ ಬಳಿ ಮದ್ಯಪಾನಕ್ಕೆ ಆಮಿಷಯೊಡ್ಡಿ, ಆತ ಕುಡಿದ ಬಳಿಕ ಆತನನ್ನು ಕೊಲೆ ಮಾಡಿ ಆತನ ಬಳಿಯಿದ್ದ ವಸ್ತುಗಳನ್ನು ಲೂಟಿ ಮಾಡಿದ್ದಾನೆ. ಬಳಿ ಮರುದಿನ ರಾತ್ರಿ ಭದ್ರತಾ ಸಿಬ್ಬಂದಿಗೆ ಇರಿದು ಕೊಲೆ ಮಾಡಿದ್ದಾನೆ. ಮೂರನೇಯ ರಾತ್ರಿ ವ್ಯಕ್ತಿಯೊಬ್ಬ ಶಿರಚ್ಚೇಧನ ಮಾಡಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಯುವಕನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.