Select Your Language

Notifications

webdunia
webdunia
webdunia
webdunia

ಸೇನಾ ಹೆಲಿಕಾಪ್ಟರ್ ಪತನ! ಸೈನಿಕರು ದುರ್ಮರಣ

ಸೇನಾ ಹೆಲಿಕಾಪ್ಟರ್ ಪತನ! ಸೈನಿಕರು ದುರ್ಮರಣ
ಇಸ್ಲಾಮಾಬಾದ್ , ಮಂಗಳವಾರ, 27 ಸೆಪ್ಟಂಬರ್ 2022 (13:54 IST)
ಇಸ್ಲಾಮಾಬಾದ್ : ಪಾಕಿಸ್ತಾನ ಸೇನಾ ಪಡೆಯ ಹೆಲಿಕಾಪ್ಟರ್ ಪತನಗೊಂಡು 6 ಮಂದಿ ಸೈನಿಕರು ಮೃತಪಟ್ಟಿರುವ ಘಟನೆ ಹರ್ನೈ ಬಲೂಚಿಸ್ತಾನದ ಖೋಸ್ಟ್ ಬಳಿ ನಡೆದಿದೆ ಎಂದು ವರದಿಯಾಗಿದೆ.

ಹರ್ನೈ  ಬಲೂಚಿಸ್ತಾನದ ಖೋಸ್ಟ್ ಬಳಿ ಸೇನಾ ಕಾರ್ಯಚರಣೆ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ. ಪರಿಣಾಮ ಹೆಲಿಕಾಪ್ಟರ್ನಲ್ಲಿದ್ದ ಇಬ್ಬರು ಪೈಲಟ್ ಸೇರಿ ಒಟ್ಟು 6 ಸೈನಿಕರು ದುರ್ಮರಣ ಹೊಂದಿದ್ದಾರೆ.

6 ಸೈನಿಕರ ಪೈಕಿ ಇಬ್ಬರು ಉನ್ನತ ಶ್ರೇಣಿಯ ಸೇನಾ ಆಧಿಕಾರಿಗಳಾಗಿದ್ದು, ಇನ್ನುಳಿದ ಮೂವರು ಕಮಾಂಡೋಗಳಾಗಿದ್ದರು.

ಪಾಕಿಸ್ತಾನ ಸೇನೆಯ ಏವಿಯೇಷನ್ ಹೆಲಿಕಾಪ್ಟರ್ ಕಳೆದ ತಿಂಗಳು ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿದ್ದಾಗ ಎಟಿಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಷೇರು ಮಾರುಕಟ್ಟೆ : ಹೂಡಿಕೆದಾರರಿಗೆ 7 ಲಕ್ಷ ಕೋಟಿ ನಷ್ಟ!