ಗುಜರಾತ್‌ನ ವಿಶಾಲವಾದ ರಿಲಯನ್ಸ್ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನಲ್ಲಿ ಅನಂತ್ ಅಂಬಾನಿ ಅವರ ಕನಸ್ಸಿನ ವಂತಾರ ವನ್ಯಜೀವಿ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.
3,000-ಎಕರೆಯಲ್ಲಿ ನಿರ್ಮಾಣವಾದ ವಂತಾರ "ಸ್ಟಾರ್ ಆಫ್ ದಿ ಫಾರೆಸ್ಟ್" ಪ್ರಪಂಚದಾದ್ಯಂತ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿಯನ್ನು ಪರಿವರ್ತಿಸುವ ಯೋಜನೆಯಾಗಿದೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾದ ಮಾಹಿತಿ ಇಲ್ಲಿದೆ. ವಂತಾರಾ ಭೇಟಿ ವೇಳೆ ಮೋದಿ ಅಲ್ಲಿಯ ಕ್ಷಣಗಳನ್ನು ಎಂಜಾಯ್ ಮಾಡಿದ್ದಾರೆ. ಪ್ರಾಣಿಗಳ ಚಲನವಲನವನ್ನು ಹತ್ತಿರದಲ್ಲಿ ಕಂಡು ಖುಷ್ ಆಗಿದ್ದಾರೆ.
ಪ್ರಾರಂಭ ಮತ್ತು ಸಾರ್ವಜನಿಕ ಪ್ರವೇಶ
ಫೆಬ್ರವರಿ 26, 2024 ರಂದು ವಂತಾರಾ ಅಧಿಕೃತವಾಗಿ ತೆರೆಯಲಾಯಿತು. ಆದರೆ ಇದು ಇನ್ನೂ ಸಾರ್ವಜನಿಕರಿಗೆ ತೆರೆದಿಲ್ಲ. ಅನಂತ್ ಅಂಬಾನಿ ಅವರು ಶೀಘ್ರದಲ್ಲೇ ಈ ಸೌಲಭ್ಯವನ್ನು ಸಂದರ್ಶಕರಿಗೆ ಮುಕ್ತಗೊಳಿಸುವುದಾಗಿ ಹೇಳಿದ್ದಾರೆ.
ಸೌಲಭ್ಯಗಳು ಮತ್ತು ವೈಶಿಷ್ಟ್ಯಗಳು
ನೈಸರ್ಗಿಕ ಪರಿಸರದಪಂದಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ವಂತರಾ ಹೊಂದಿದೆ.