Select Your Language

Notifications

webdunia
webdunia
webdunia
webdunia

ಇದೊಂದು ಮರೆಯಲಾಗದ ಅನುಭವ: ದ್ರೌಪದಿ ಮುರ್ಮು

Speaker Draupadi Murmu

Sampriya

ಅಂಬಾಲಾ , ಬುಧವಾರ, 29 ಅಕ್ಟೋಬರ್ 2025 (19:19 IST)
Photo Credit X
ಅಂಬಾಲಾ: ಹರಿಯಾಣದ ಅಂಬಾಲಾ ವಾಯುನೆಲೆಯಿಂದ ರಫೇಲ್‌ ಫೈಟರ್‌ ಜೆಟ್‌ನಲ್ಲಿ ಹಾರಾಟ ನಡೆಸಿದ್ದು, ‘ಮರೆಯಲಾಗದ ಅನುಭವ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಣ್ಣಿಸಿದ್ದಾರೆ.

ಇನ್ನೂ ಜಿ–ಸೂಟ್‌, ಸನ್‌ಗ್ಲಾಸ್‌ ಧರಿಸಿ ಫೈಟರ್‌ ಜೆಟ್‌ ಏರಿ ಹಾರಾಟ ನಡೆಸುವ ಮೂಲಕ ಎರಡು ವಿವಿಧ ರೀತಿಯ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡ ಅವರು,  ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಿದ್ದು ನನಗೆ ಮರೆಯಲಾಗದ ಅನುಭವ. ಪ್ರಬಲ ರಫೇಲ್ ವಿಮಾನದ ಈ ಮೊದಲ ಹಾರಾಟವು ದೇಶದ ರಕ್ಷಣಾ ಸಾಮರ್ಥ್ಯಗಳ ಬಗ್ಗೆ ನನ್ನಲ್ಲಿ ಹೊಸ ಹೆಮ್ಮೆ ಮೂಡಿಸಿದೆ.  ಈ ಹಾರಾಟವನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದಕ್ಕೆ ವಾಯುಸೇನೆ ಮತ್ತು ವಾಯುನೆಲೆಯಲ್ಲಿನ ತಂಡಕ್ಕೆ ಧನ್ಯವಾದ ಸಲ್ಲಿಸಿದರು. 

ದೇಶದ ಮೊದಲ ಮಹಿಳಾ ಫೈಟರ್‌ ಜೆಟ್‌ ಪೈಲಟ್‌ ಆಗಿರುವ ಶಿವಾಂಗಿ ಸಿಂಗ್‌ ಅವರೊಂದಿಗೆ ಮುರ್ಮು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ನಾನು ಬೆಂಗಳೂರಿನಲ್ಲಿ ಲಭ್ಯವಿದ್ದೇನೆ, ಹೀಗಂದಿದ್ಯಾಕೆ ಸ್ಪೀಕರ್ ಯುಟಿ ಖಾದರ್