ಜಮ್ಮು ಕಾಶ್ಮೀರಕ್ಕಾಗಿ ನನ್ನ ಜೀವ ಕೊಡಲೂ ಸಿದ್ಧ: ಲೋಕಸಭೆಯಲ್ಲಿ ಅಮಿತ್ ಶಾ ಭಾಷಣ

ಮಂಗಳವಾರ, 6 ಆಗಸ್ಟ್ 2019 (11:38 IST)
ನವದೆಹಲಿ: ಕಾಶ್ಮೀರಕ್ಕಾಗಿ ನಾವು ಪ್ರಾಣ ನೀಡಲೂ ಸಿದ್ಧ. ಜಮ್ಮು ಕಾಶ್ಮೀರ ಅಂತಾ ಹೇಳುವಾಗ ಪಿಒಕೆ ಕೂಡಾ ಒಳಗೊಂಡು ಹೇಳುತ್ತಿದ್ದೇನೆ ಎಂದು ಗೃಹಮಂತ್ರಿ ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದ್ದಾರೆ.


ನಿನ್ನೆಯಷ್ಟೇ ಲೋಕಸಭೆಯಲ್ಲಿ ಆರ್ಟಿಕಲ್ 370 ರದ್ದು ಮಾಡಿದ ಪ್ರಸ್ತಾವನೆಗೆ ಒಪ್ಪಿಗೆ ಪಡೆದ ಬಳಿಕ ಇಂದೂ ಕೂಡಾ ಅಮಿತ್ ಶಾ ಈ ವಿಚಾರದ ಬಗ್ಗೆ ತಮ್ಮ ವಾದ ಮಂಡಿಸಿದ್ದು, ಸಂವಿಧಾನದ ಪ್ರಕಾರವೇ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಸಮರ್ಥಿಸಿದ್ದಾರೆ.

ಈ ದಿನವನ್ನು ಭಾರತದ ಇತಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ನಮ್ಮ ಪ್ರಸ್ತಾವನೆಗೆ ರಾಷ್ಟ್ರಪತಿಗಳೂ ಸಮ್ಮತಿಸಿದ್ದರು. ಪುನರಾಚನೆ ಎಂಬುದು ಕೇವಲ ರಾಜಕೀಯ ವಿಚಾರವಲ್ಲ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತವರೂರಿನಲ್ಲೇ ಸಿದ್ದರಾಮಯ್ಯರವರ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್ ಬಂದ್