ಆರ್ಟಿಕಲ್ 370 ರದ್ದು ಮಾಡಿದ್ದರ ಬಗ್ಗೆ ಭಾಷಣ ಮಾಡಲಿರುವ ಪ್ರಧಾನಿ ಮೋದಿ

ಮಂಗಳವಾರ, 6 ಆಗಸ್ಟ್ 2019 (10:32 IST)
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದರ ಬಗ್ಗೆ  ವ್ಯಾಪಕ ಚರ್ಚೆಯಾಗುತ್ತಿದೆ. ಈ ಬಗ್ಗೆ ಇದೀಗ ಸ್ವತಃ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.


ನಿನ್ನೆಯಷ್ಟೇ ಗೃಹ ಮಂತ್ರಿ ಅಮಿತ್ ಶಾ ಸಂಸತ್ ನಲ್ಲಿ ಆರ್ಟಿಕಲ್ 370 ರದ್ದು ಮಾಡುವ ನಿರ್ಧಾರ ಪ್ರಕಟಿಸಿದ್ದರು. ಈ ಬಗ್ಗೆ ಗೃಹ ಮಂತ್ರಿ ಮಂಡಿಸಿದ್ದ ಪ್ರಸ್ತಾವನೆಗೆ ಸಂಸತ್ ನ ಅನುಮೋದನೆಯೂ ಸಿಕ್ಕಿದೆ.

ಆದರೆ ಈ ಬಗ್ಗೆ ಕೆಲವರಲ್ಲಿ ಇನ್ನೂ ಅನುಮಾನಗಳಿವೆ. ಹೀಗಾಗಿ ಪ್ರಧಾನಿ ಮೋದಿಯೇ ದೇಶದ ಮುಂದೆ ಈ ವಿಶೇಷ ಪ್ರಾತಿನಿಧ್ಯ ರದ್ದು ಮಾಡಿದ್ದರ ಪ್ರಾಮುಖ್ಯತೆ ಬಗ್ಗೆ ವಿವರಿಸಲಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಲೆನಾಡಿನಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ