ಆರ್ಟಿಕಲ್ 370 ರದ್ದಿಗೆ ಧೋನಿ ಕಾರಣವಂತೆ!

ಮಂಗಳವಾರ, 6 ಆಗಸ್ಟ್ 2019 (09:32 IST)
ನವದೆಹಲಿ: ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 370 ರದ್ದುಗೊಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


ಕೆಲವರಂತೂ ಕೇಂದ್ರದ ಈ ನಿರ್ಧಾರಕ್ಕೂ ಕ್ರಿಕೆಟಿಗ ಧೋನಿಗೂ ಸಂಬಂಧ ಕಲ್ಪಿಸಿದ್ದಾರೆ. ಧೋನಿ ಸದ್ಯಕ್ಕೆ ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಹೀಗಾಗಿ ಧೋನಿ ಕಾಶ್ಮೀರಕ್ಕೆ ಹೋಗಿದ್ದೇ ತಡ ಆರ್ಟಿಕಲ್ 370 ರದ್ದಾಗಿದೆ. ಹೀಗಾಗಿ ಕ್ಯಾಪ್ಟನ್ ಕೂಲ್ ಇಲ್ಲಿಯೂ ತಾವು ಬೆಸ್ಟ್ ಫಿನಿಶರ್ ಎಂದು ಸಾಬೀತುಪಡಿಸಿದ್ದಾರೆ ಎಂದು ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ-ವಿಂಡೀಸ್ ತೃತೀಯ ಟಿ20: ಇಂದಾದರೂ ಸಿಗುತ್ತಾ ಕೆಎಲ್ ರಾಹುಲ್ ಗೆ ಸ್ಥಾನ?