Publish Date: Tue, 14 Aug 2018 (10:12 IST)
Updated Date: Tue, 14 Aug 2018 (10:30 IST)
ನವದೆಹಲಿ: 2019 ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜಸ್ಥಾನದ ಬಿಜೆಪಿ ಸಂಸದರು, ಶಾಸಕರಿಗೆ ಅಧ್ಯಕ್ಷ ಅಮಿತ್ ಶಾ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅಮಿತ್ ಶಾ ಸಂಸದೆ ಹೇಮಾಮಾಲಿನಿ, ಸಂಗೀತ್ ಸೋಮ್, ಸುರೇಶ್ ರಾಣಾ, ಮುರಳಿ ಮನೋಹರ್ ಜೋಶಿ, ಸಂಜೀವ್ ಬಾಲ್ಯಾನ್, ರಾಜೇಂದ್ರ ಅಗರ್ವಾಲ್ ಮುಂತಾದ ಘಟಾನುಘಟಿಗಳಿಗೆ ಮಾತಾಡುವುದು ಬಿಟ್ಟು ತಮ್ಮ ಕ್ಷೇತ್ರಗಳತ್ತ ಹೋಗಿ ಕೇಂದ್ರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಹೇಮಾಮಾಲಿನಿ ಸೇರಿದಂತೆ ಈ ಸಂಸದರಿಗೆ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೆ ಹಾನಿ ಉಂಟುಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಹೇಮಾಮಾಲಿನಿ ತಾವು ಮನಸ್ಸು ಮಾಡಿದರೆ ನಿಮಿಷದಲ್ಲಿ ಮುಖ್ಯಮಂತ್ರಿಯಾಗುವೆ ಎಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇಂತಹಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಮಾಡುವ ಬದಲು ಕ್ಷೇತ್ರದಲ್ಲಿ ಕೆಲಸ ಮಾಡುವತ್ತ ಗಮನ ಹರಿಸಿ ಎಂದು ಅಮಿತ್ ಶಾ ಇವರುಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.