Select Your Language

Notifications

webdunia
webdunia
webdunia
webdunia

ಪಾಕ್‌ ಪರ ಬೇಹುಗಾರಿಕೆ ಆರೋಪ: ಯೂಟ್ಯೂಬರ್ ಜ್ಯೋತಿ ರಾಣಿ ಅರೆಸ್ಟ್‌

ಜ್ಯೋತಿ ಮಲ್ಹೋತ್ರಾ ಅಕಾ ಜ್ಯೋತಿ ರಾಣಿ

Sampriya

ಹರಿಯಾಣ , ಶನಿವಾರ, 17 ಮೇ 2025 (17:27 IST)
Photo Credit X
ಹರಿಯಾಣ: ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ಅಕಾ ಜ್ಯೋತಿ ರಾಣಿ ಅವರನ್ನು ಪಾಕಿಸ್ತಾನದೊಂದಿಗೆ ಭಾರತೀಯ ಮಿಲಿಟರಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಹರಿಯಾಣದ ಹಿಸಾರ್‌ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಪಂಜಾಬ್ ಮತ್ತು ಹರಿಯಾಣದ 25 ವರ್ಷದ ವಿದ್ಯಾರ್ಥಿ ಮತ್ತು 24 ವರ್ಷದ ಭದ್ರತಾ ಸಿಬ್ಬಂದಿ ಸೇರಿದಂತೆ ಆರು ಜನರಲ್ಲಿಈಕೆ ಒಬ್ಬಳಾಗಿದ್ದಾಳೆ.

ತನ್ನ ಯೂಟ್ಯೂಬ್‌ನಲ್ಲಿ ತನ್ನನ್ನು 'ಅಲೆಮಾರಿ ಸಿಂಹದ ಹುಡುಗಿ ಅಲೆಮಾರಿ', 'ಹರ್ಯಾನ್ವಿ+ಪಂಜಾಬಿ' ಮತ್ತು 'ಪುರಾನೆ ಖ್ಯಾಲೋ ಕಿ ಮಾಡರ್ನ್ ಲಡ್ಕಿ' (ಸಾಂಪ್ರದಾಯಿಕ ದೃಷ್ಟಿಕೋನ ಹೊಂದಿರುವ ಆಧುನಿಕ ಹುಡುಗಿ) ಎಂದು ಬಣ್ಣಿಸಿಕೊಂಡಿರುವ ಜ್ಯೋತಿ  ಪಾಕಿಸ್ತಾನದ ಎಹ್ಸಾನ್-ಉರ್-ರಹೀಮ್ ಅಧಿಕಾರಿಯೊಂದಿಗೆ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಅದಲ್ಲದೆ ಎರಡು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಜ್ಯೋತಿ ರಾಣಿ ವಿರುದ್ಧ ವಿವಿಧ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಯದ ಕೊರಗಜ್ಜನ ಕೋಲದಲ್ಲಿ ಭಾಗಿಯಾದ ಬಿವೈ ವಿಜಯೇಂದ್ರ