ನವದೆಹಲಿ : ಬ್ರಿಟನ್ನ ಮುಂದಿನ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಾಕ್ ಆಯ್ಕೆಯಾಗಿದ್ದಾರೆ.
ಇದೀಗ ಯುಕೆಯ ಪ್ರಧಾನಿಯಾಗಿ ಅಧಿಕಾರವನ್ನು ಅಲಂಕರಿಸಲಿರುವ ಮೊದಲ ಭಾರತೀಯ ವ್ಯಕ್ತಿಯಾಗಿಯೂ ಸುನಾಕ್ ಹೊರಹೊಮ್ಮಿದ್ದಾರೆ.
42 ವರ್ಷದ ರಿಷಿ ಸುನಾಕ್ ಭಾರತ ಮತ್ತು ಪೂರ್ವ ಆಫ್ರಿಕಾದಿಂದ ವಲಸೆ ಬಂದ ಶ್ರೀಮಂತ ಹಿಂದೂ ವಂಶಸ್ಥರಾಗಿದ್ದಾರೆ. ಅವರು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿಯ ಪತಿಯಾಗಿದ್ದಾರೆ.
ಸುನಾಕ್ ಅವರು 2015ರಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದರು. ಬಳಿಕ 2017 ಹಾಗೂ 2019ರಲ್ಲೂ ಮರು ಆಯ್ಕೆಯಾದರು.
2018ರಲ್ಲಿ ಸಚಿವರಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಿದ ಸುನಾಕ್ ಅವರನ್ನು 2019ರ ಜುಲೈಯಲ್ಲಿ ಬ್ರಿಟನ್ ಹಣಕಾಸಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಬಳಿಕ 2020ರ ಫೆಬ್ರವರಿಯಲ್ಲಿ ಬ್ರಿಟನ್ನ ಹಣಕಾಸು ಸಚಿವರಾಗಿ ನೇಮಕಗೊಂಡರು.