Publish Date: Sat, 19 Feb 2022 (07:02 IST)
Updated Date: Sat, 19 Feb 2022 (07:44 IST)
ಚೆನ್ನೈ : ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಅವಮಾನ ತಾಳಲಾರದೆ ತಂದೆ ಮನೆಯವರನ್ನೆಲ್ಲ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.
ಟೀ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣನ್ ತನ್ನ ಹಿರಿಯ ಮಗಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಮನನೊಂದಿದ್ದರು. ಹೀಗಾಗಿ ಅವರು ತಮ್ಮ ಹೆಂಡತಿ, ಮಕ್ಕಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ಅವರ ಮಗಳು ಈಗ ಪತಿಯೊಂದಿಗೆ ವಾಸಿಸುತ್ತಿದ್ದು, ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ ಎಂದು ನಾಗಪಟ್ಟಣಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜಿ ಜವಾಹರ್ ಹೇಳಿದ್ದಾರೆ.
ಮಗಳ ಮದುವೆ ವಿಚಾರವಾಗಿ ನೊಂದ ಲಕ್ಷ್ಮಣನ್ ರಾತ್ರಿ ವೇಳೆ ರುಬ್ಬುವ ಕಲ್ಲನ್ನು ತೆಗೆದುಕೊಂಡು ತನ್ನ ಪತ್ನಿ ಭುವನೇಶ್ವರಿ ಮತ್ತು ಇಬ್ಬರು ಕಿರಿಯ ಪುತ್ರಿಯರಾದ ವಿನೋತಿನಿ ಮತ್ತು ಅಕ್ಷಯ ಅವರನ್ನು ಬರ್ಬರವಾಗಿ ಕೊಂದಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಶವಗಳನ್ನು ಶವಪರೀಕ್ಷೆಗಾಗಿ ನಾಗಪಟ್ಟಣಂ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ನಾಗಪಟ್ಟಣಂ ಜಿಲ್ಲೆಯ ಎಸ್ಪಿ ಜವಾಹರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ.