Select Your Language

Notifications

webdunia
webdunia
webdunia
webdunia

ಮದ್ಯ ಸೇವಿಸುವವರು ಮಹಾಪಾಪಿಗಳು: ನಿತೀಶ್ ಕುಮಾರ್

ಮದ್ಯ ಸೇವಿಸುವವರು ಮಹಾಪಾಪಿಗಳು: ನಿತೀಶ್ ಕುಮಾರ್
ಪಾಟ್ನಾ , ಗುರುವಾರ, 31 ಮಾರ್ಚ್ 2022 (14:16 IST)
ಪಾಟ್ನಾ : ಮಹಾತ್ಮ ಗಾಂಧಿ ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು. ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿಗಳು.

ಅಂತವರನ್ನು ಭಾರತೀಯರೆಂದು ಪರಿಗಣಿಸಲಾಗುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಜನರು ಸೇವಿಸುತ್ತಾರೆ.

ಹೀಗಾಗಿ ಅದರ ಪರಿಣಾಮಗಳಿಗೆ ಅವರೇ ಹೊಣೆ ಹೊರತು ರಾಜ್ಯ ಸರ್ಕಾರ ಹೊಣೆಯಲ್ಲ. ಮದ್ಯಪಾನ ಸೇವಿಸಿ ಮೃತಪಡುವ ಜನರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಹೇಳಿದರು.

ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಮಸೂದೆ, 2022, ರಾಜ್ಯಪಾಲರ ಅನುಮೋದನೆಯನ್ನು ಪಡೆಯಿತು. ಇದರ ಪ್ರಕಾರ ಅಪರಾಧಿಗಳು ದಂಡವನ್ನು ಠೇವಣಿ ಮಾಡಿದ ನಂತರ ಡ್ಯೂಟಿ ಮ್ಯಾಜಿಸ್ಟ್ರೇಟ್ನಿಂದ ಜಾಮೀನು ಪಡೆಯುತ್ತಾರೆ. ಒಂದು ವೇಳೆ ವ್ಯಕ್ತಿಯು ಅದನ್ನು ಪಾವತಿಸಲು ವಿಫಲವಾದರೆ, ಒಂದು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ಹಲಾಲ್ ಬಗ್ಗೆ ಸರ್ಕಾರ ಮೂಗು ತೂರಿಸುವುದಿಲ್ಲ: ಬಿ.ಸಿ ನಾಗೇಶ್