Publish Date: Tue, 13 Aug 2024 (16:35 IST)
Updated Date: Tue, 13 Aug 2024 (16:39 IST)
ಉತ್ತರಪ್ರದೇಶ: ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕಟ್ಟಿ ಹಾಕಿ ಹಿಂಸೆ ನೀಡಿ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಪತಿಯನ್ನು ಸುರ್ಜೀತ್ ಎಂದು ಗುರುತಿಸಲಾಗಿದೆ. ಸೋಮವಾರ ಕಂಠಪೂರ್ತಿ ಕುಡಿದ ಬಂದ ಸುರ್ಜೀತ್ ತನ್ನ ಪತ್ನಿಯ ಕಾಲುಗಳನ್ನು ಕಟ್ಟಿ ಹಾಕಿ, ಥಳಿಸಿದ್ದಾನೆ. ನಂತರ ಆಕೆಯ ಮರ್ಮಾಂಗದ ಒಳಗಡೆ ಚಪಾಟಿ ಲಟ್ಟಣಿಗೆ ತುರುಕಿ, ಹತ್ಯೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸುವಾಗ ಆಕೆಯ ಹೊಟ್ಟೆಯೊಳಗೆ ಲಟ್ಟಣಿಗೆ ಪತ್ತೆಯಾಗಿದೆ.
ಮೃತ ಸಂತ್ರಸ್ತೆಯನ್ನು 28 ವರ್ಷದ ರೇಷ್ಮಾ ಎಂದು ಗುರುತಿಸಲಾಗಿದೆ. 10 ವರ್ಷಗಳ ಹಿಂದೆ ಸುರ್ಜೀತ್ ಹಾಗೂ ರೇಷ್ಮಾ ಮದುವೆಯಾಗಿದ್ದರು. ಸುರ್ಜೀತ್ ಮದ್ಯವ್ಯಸನಿಯಾಗಿದ್ದು, ಈ ದಂಪತಿಗಳ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಸೋಮವಾರ ತೀವ್ರವಾಗಿ ಅಮಲೇರಿದ ಸ್ಥಿತಿಯಲ್ಲಿ ಮನೆಗೆ ಬಂದು ಸುರ್ಜೀತ್ ಆಕೆಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ.
ಫಿರೋಜಾಬಾದ್ನ ಪೊಲೀಸ್ ಅಧೀಕ್ಷಕ ಸರ್ವೇಶ್ ಕುಮಾರ್ ಮಿಶ್ರಾ, ಸುರ್ಜೀತ್ ಮತ್ತು ಅವನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.