Select Your Language

Notifications

webdunia
webdunia
webdunia
webdunia

ಜೈ ಶ್ರೀರಾಮ್‌ ಕೂಗುವ ಬಿಜೆಪಿಗರಿಗೆ ಆದರ್ಶವಾಗಿರುವುದು ಕೀಚಕ, ದುಷ್ಯಾಸನರೇ ಹೊರತು ರಾಮನಲ್ಲ: ಕಾಂಗ್ರೆಸ್

Rape Case Against BJP Sharath

Sampriya

ಬೆಂಗಳೂರು , ಶನಿವಾರ, 3 ಆಗಸ್ಟ್ 2024 (18:17 IST)
ಬೆಂಗಳೂರು: ಮಹಿಳೆಯರನ್ನು ನಂಬಿಸಿ, ದೈಹಿಕವಾಗಿ ಬಳಸಿ ವಂಚಿಸುವ ಟ್ರೈನಿಂಗನ್ನು ಬಿಜೆಪಿ  ಕಚೇರಿಯಲ್ಲೇ ನೀಡಲಾಗುತ್ತಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿ ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದೂರು ನೀಡಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್ ಕರ್ನಾಟಕ,  'ಬಲಾತ್ಕಾರಿ ಜನತಾ ಪಾರ್ಟಿ'ಯಲ್ಲಿ ಅತ್ಯಾಚಾರಿಗಳು, ಮಹಿಳಾ ಪೀಡಕರು, ಭ್ರಷ್ಟರು ತುಂಬಿ ತುಳುಕುತ್ತಿದ್ದಾರೆಯೇ. ಮಹಿಳೆಯರನ್ನು ನಂಬಿಸಿ, ದೈಹಿಕವಾಗಿ ಬಳಸಿ ವಂಚಿಸುವ ಟ್ರೈನಿಂಗನ್ನು ಬಿಜೆಪಿ  ಕಚೇರಿಯಲ್ಲೇ ನೀಡಲಾಗುತ್ತಿದೆಯೇ ಎಂದು ಪ್ರಶ್ನೆ ಮಾಡಿದೆ.

ಶರತ್ ಕಲ್ಯಾಣಿ ಎಂಬ ಶಿವಮೊಗ್ಗದ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ, ಈತ ತಲೆ ಮರೆಸಿಕೊಂಡಿದ್ದಾನೆ.

ಶಿವಮೊಗ್ಗ ಒಂದರಲ್ಲೇ ಇತ್ತೀಚಿಗೆ ಹೊರಬಂದ ಎರಡನೇ ಪ್ರಕರಣವಿದು. ಸಾಮಾಜಿಕ ಜಾಲತಾಣದಲ್ಲಿನ ₹2 ಭಕ್ತರು ಇಂತಹ ವಂಚಕರು, ಮಹಿಳಾ ಪೀಡಕರೇ ಆಗಿರುತ್ತಾರೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ.

ಧರ್ಮ, ಸಂಸ್ಕೃತಿ ಎಂದು ಭಾಷಣ ಕುಟ್ಟುವ, ಜೈ ಶ್ರೀರಾಮ್ ಎಂದು ಕೂಗು ಹಾಕುವ ಬಿಜೆಪಿಗರಿಗೆ ಅಸಲಿಗೆ ಆದರ್ಶವಾಗಿರುವುದು ಕೀಚಕ, ದುಷ್ಯಾಸನರೇ ಹೊರತು ರಾಮ ಅಲ್ಲ.




Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಹೊರಟವರು ಈ ಸುದ್ದಿ ಓದಲೇ ಬೇಕು