Publish Date: Tue, 02 Jul 2024 (15:49 IST)
Updated Date: Tue, 02 Jul 2024 (15:53 IST)
ಬೆಂಗಳೂರು: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣವನ್ನು ಬಿಜೆಪಿ ತಿರುಚಲು ಯತ್ನಿಸುತ್ತಿದೆ, ಆದರೆ ಭಾರತೀಯರಯ ಅದಕ್ಕೆಲ್ಲ ತಲೆದೂಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ನಿನ್ನೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಾಗ ಹಿಂದೂಗಳೆಸಿಕೊಂಡವರಿಂದಲೇ ಹಿಂಸಾಚಾರ ನಡೆಯುತ್ತಿದೆ ಎಂದಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿ ರಾಹುಲ್ ಗಾಂಧಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದು, ಕೂಡಲೇ ಅವರು ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿದ್ದರು.
ಈ ಬಗ್ಗೆ ಪೋಸ್ಟ್ ಹಾಕಿದ ರಾಜ್ಯ ಕಾಂಗ್ರೆಸ್ , ನೈಜ ಹಿಂದೂ ಎಂದಿಗೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ನೈಜ ಹಿಂದೂ ಎಂದಿಗೂ ಭಯದ ವಾತಾವರಣವನ್ನು ಸೃಷ್ಟಿಸುವುದಿಲ್ಲ, ನೈಜ ಹಿಂದೂ ಎಂದಿಗೂ ದ್ವೇಷವನ್ನು ಪ್ರತಿಪಾದಿಸುವುದಿಲ್ಲ, ಆದರೆ ಬಿಜೆಪಿ 24/7 ಹಿಂಸೆ, ದ್ವೇಷ, ಭಯವನ್ನು ಸ್ಥಾಪಿಸಲು ಹವಣಿಸುತ್ತದೆ. ರಾಹುಲ್ ಗಾಂಧಿ ಅವರು ಮಾತನ್ನು ತಿರುಚಲು ಕರ್ನಾಟಕ ಬಿಜೆಪಿ ಪ್ರಯತ್ನಿಸುತ್ತಿದೆ. ತನ್ನ ಹಳೆಯ ಫೇಕ್ ಪ್ರಾಪಗಂಡಾ ಮಿಷನ್ ಗೆ ಚಾಲನೆ ಕೊಟ್ಟಿದೆ, ಆದರೆ ಅವರ ಹಳೆಯ ಚಾಳಿಗೆ ಭಾರತೀಯರು ಇಂದು ತಲೆದೂಗುವುದಿಲ್ಲ. ಇದು ಅಯೋದ್ಯೆಯ ಮತದಾರರೇ ನಿರೂಪಿಸಿದ್ದಾರೆ.
Sampriya
Publish Date: Tue, 02 Jul 2024 (15:49 IST)
Updated Date: Tue, 02 Jul 2024 (15:53 IST)