Select Your Language

Notifications

webdunia
webdunia
webdunia
webdunia

ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಹೊರಟವರು ಈ ಸುದ್ದಿ ಓದಲೇ ಬೇಕು

ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಹೊರಟವರು ಈ ಸುದ್ದಿ ಓದಲೇ ಬೇಕು

Sampriya

, ಶನಿವಾರ, 3 ಆಗಸ್ಟ್ 2024 (18:03 IST)
Photo Courtesy X
ಮಂಗಳೂರು:   ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಇದೀಗ ಮಂಗಳೂರು ಹಾಸನ ಮಾರ್ಗದ ಯಡಕುಮಾರಿ ಮತ್ತು ಕಡಗರಹಳ್ಳಿ ಮಧ್ಯೆ ಮೇಳೆ ಗುಡ್ಡಕುಸಿದಿದೆ. ಇದರ ಪರಿಣಾಮವಾಗಿ ಇದೀಗ ಮಂಗಳೂರು ಬೆಂಗಳೂರಿನ 12ರೈಲು ಸೇವೆಯನ್ನು ರದ್ದು ಮಾಡಲಾಗಿದೆ.

16511 ಕೆಎಸ್‌ಆರ್‌ ಬೆಂಗಳೂರು-ಕಣ್ಣೂರ ರೈಲು ಆ.4 ಮತ್ತು 5ರಂದು. 16512 ಕಣ್ಣೂರ-ಕೆಎಸ್‌ಆರ್‌ ಬೆಂಗಳೂರು ರೈಲಿನ ಸೇವೆಯನ್ನು 5 ಮತ್ತು 6ರಂದು ರದ್ದು ಪಡಿಸಲಾಗಿದೆ.

16595 ಕೆಎಸ್‌ಆರ್‌ ಬೆಂಗಳೂರು-ಕಾರವಾರ ಸ್ಪೇಷಲ್‌ ರೈಲು 4 ಮತ್ತು 5ರಂದು ಹಾಗೂ 16596 ಕಾರವಾರ-ಕೆಎಸ್‌ಆರ್‌ ಬೆಂಗಳೂರು ರೈಲು 5 ಮತ್ತು 6ರಂದು.

16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸಪ್ರೆಸ್‌ ರೈಲು 4 ಮತ್ತು 5ರಂದು ಹಾಗೂ 16586 ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸಪ್ರೆಸ್‌ ರೈಲು 5 ಮತ್ತು 6ರಂದು.

07377 ವಿಜಯಪುರ-ಮಂಗಳೂರು ಸೆಂಟ್ರಲ್ ರೈಲು 4 ಮತ್ತು 5ರಂದು ಹಾಗೂ 07378 ಮಂಗಳೂರು ಸೆಂಟ್ರಲ್‌-ವಿಜಯಪುರ ರೈಲು 5 ಮತ್ತು 6ರಂದು.

16515 ಯಶವಂತಪುರ ಜಂಕ್ಷನ್‌-ಕಾರವಾರ ಎಕ್ಸಪ್ರೆಸ್‌ ರೈಲು 5ರಂದು ಹಾಗೂ 16516 ಕಾರವಾರ-ಯಶವಂತಪುರ ಜಂಕ್ಷನ್‌ ಎಕ್ಸಪ್ರೆಸ್‌ ರೈಲು 6ರಂದು.

16575 ಯಶವಂತಪುರ ಜಂಕ್ಷನ್‌-ಮಂಗಳೂರು ಜಂಕ್ಷನ್‌ ರೈಲು 4ರಂದು ಹಾಗೂ 16576 ಮಂಗಳೂರು ಜಂಕ್ಷನ್‌-ಯಶವಂತಪುರ ಜಂಕ್ಷನ್‌ ರೈಲು ಸೇವೆಯನ್ನು ಆ.5ರಂದು ರದ್ದುಪಡಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪಾದಯಾತ್ರೆ ಬಗ್ಗೆ ಗುರ್ ಅಂತಿದ್ದ ಕುಮಾರಸ್ವಾಮಿ ಮುನಿಸು ತಣ್ಣಗಾಗಿಸಿದ್ದು ಯಾರು ಗೊತ್ತಾ