Select Your Language

Notifications

webdunia
webdunia
webdunia
webdunia

ಚಲಿಸುತ್ತಿದ್ದ ಟ್ರಕ್ ಗೆ ಸಿಲುಕಿದ ಬೈಕ್, ಆಗ್ರಾ ಹೆದ್ದಾರಿಯಲ್ಲಿ ನಡೆದ ಎದೆ ನಡುಗಿಸುವ ವಿಡಿಯೋ

Agra truck dragging

Krishnaveni K

ಆಗ್ರಾ , ಮಂಗಳವಾರ, 24 ಡಿಸೆಂಬರ್ 2024 (14:01 IST)
ಆಗ್ರಾ: ಬೃಹತ್ ಗಾತ್ರದ ಟ್ರಕ್ ನ ಮುಂದಿನ ಚಕ್ರಕ್ಕೆ ಸಿಲುಕಿರುವ ಇಬ್ಬರು ಯುವಕರು ಪ್ರಾಣ ಭೀತಿಯಲ್ಲೇ ಕಿರುಚಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆ ಆಗ್ರಾದ ಹೆದ್ದಾರಿಯಲ್ಲಿ ನಡೆದಿದೆ ಎನ್ನಲಾಗಿದೆ. ರಾತ್ರಿ ಊಟ ಮುಗಿಸಿಕೊಂಡು ಜಾಕಿರ್ ಎಂಬಾತ ತನ್ನ ಸ್ನೇಹಿತನನ್ನು ಕೂರಿಸಿಕೊಂಡು ತೆರಳುತ್ತಿದ್ದಾಗ ಆತನ ಬೈಕ್ ಅಕಸ್ಮಾತ್ತಾಗಿ ಬೃಹತ್ ಗಾತ್ರದ ಟ್ರಕ್ ನ ಮುಂಭಾಗಕ್ಕೆ ಸಿಕ್ಕಿಹಾಕಿಕೊಂಡಿದೆ. ಟ್ರಕ್ ನ ಮುಂಭಾಗದ ಟಯರ್ ನಡುವೆ ಬೈಕ್ ಸಮೇತ ಇಬ್ಬರು ಯುವಕರು ಸಿಕ್ಕಿಹಾಕಿಕೊಂಡಿದ್ದರೂ ತಿಳಿಯದ ಟ್ರಕ್ ಡ್ರೈವರ್ ನಿಲ್ಲಿಸದೇ ಚಾಲನೆ ಮಾಡಿದ್ದಾನೆ.

ಇಬ್ಬರು ಯುವಕರು ಪ್ರಾಣಭೀತಿಯಿಂದ ನಿಲ್ಲಿಸು ಎಂದು ಎಷ್ಟೇ ಕಿರುಚಾಡಿದರೂ ಟ್ರಕ್ ಡ್ರೈವರ್ ನಿಲ್ಲಿಸಿಲ್ಲ. ಪಕ್ಕದಲ್ಲೇ ಸಾಗುತ್ತಿದ್ದ ಇನ್ನೊಂದು ಬೈಕ್ ಸವಾರನ ಬಳಿ ಟ್ರಕ್ ಡ್ರೈವರ್ ಗೆ ನಿಲ್ಲಿಸಲು ಹೇಳುವಂತೆ ಇಬ್ಬರೂ ಬೇಡಿಕೊಂಡಿದ್ದಾರೆ.

ಇವರ ಪರಿಸ್ಥಿತಿ ನೋಡಿ ಗಾಬರಿಯಾದ ಬೈಕ್ ಸವಾರ ಹೇಗಾದರೂ ಮಾಡಿ ಆ ಟ್ರಕ್ ನ್ನು ಓವರ್ ಟೇಕ್ ಮಾಡಿ ನಿಲ್ಲಿಸಿ ಇಬ್ಬರ ಪ್ರಾಣ ಉಳಿಸಿದ್ದಾನೆ. ಟ್ರಕ್ ನಿಲ್ಲಿಸಿದ ಬಳಿಕ ಜನರು ಗುಂಪು ಸೇರಿದ್ದು ಎಲ್ಲರೂ ಸೇರಿಕೊಂಡು ಟ್ರಕ್ ಡ್ರೈವರ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇದೀಗ ಪೊಲೀಸರು ಟ್ರಕ್ ಡ್ರೈವರ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಬೈಕ್ ಸಮೇತ ಸಿಲುಕಿಕೊಂಡಿದ್ದ ಜಾಕಿರ್ ಹಾಗೂ ಆತನ ಸ್ನೇಹಿತನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಜಿ ಕರ್ ಆಸ್ಪತ್ರೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್: ಎಫ್ಎಸ್ಎಲ್ ವರದಿ ಬಹಿರಂಗ