ಲಕ್ನೋ : ಕೇಂದ್ರವು ಹೊಸದಾಗಿ ಪ್ರಾರಂಭಿಸಿರುವ ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ವಾಯುಪಡೆ ಸಿಬ್ಬಂದಿ ಮೊದಲ ಬ್ಯಾಚ್ನ ನೇಮಕಾತಿಗಾಗಿ ಪರೀಕ್ಷೆಯು ಭಾನುವಾರ ಯುಪಿಯ ಕಾನ್ಪುರದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ನಡೆಯಿತು.
ದೇಶದಾದ್ಯಂತ ಜುಲೈ 24 ರಿಂದ ಜುಲೈ 31 ರವರೆಗೆ ನಡೆಯಲಿರುವ ಪರೀಕ್ಷೆಯಲ್ಲಿ ನಗರದಿಂದ ಸುಮಾರು 2.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಅಗ್ನಿವೀರ್ ಪರೀಕ್ಷೆಗೆ ಒಟ್ಟು 11 ಕೇಂದ್ರಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಆರು ಕೇಂದ್ರಗಳು ಕಾನ್ಪುರ ಔಟರ್ನಲ್ಲಿವೆ. ಪ್ರತಿ ಕೇಂದ್ರದಲ್ಲಿ ಪ್ರತಿ ದಿನ 1,875 ಅಭ್ಯರ್ಥಿಗಳು ಮೂರು ಪಾಳಿಯಲ್ಲಿ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ವಾಯುಪಡೆಯ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.