Publish Date: Sun, 03 Jul 2022 (10:51 IST)
Updated Date: Sun, 03 Jul 2022 (10:08 IST)
ಬೆಂಗಳೂರು : ಕೇಂದ್ರ ಸರ್ಕಾರದ ಹೊಸ ಯೋಜನೆ ಅಗ್ನಿಪಥ್ ಸೇನಾ ನೇಮಕಾತಿ ದೇಶಾದ್ಯಂತ ನಡೆಯುತ್ತಿದೆ.
ಇದೀಗ ಕರ್ನಾಟಕದಲ್ಲಿ ಸೇನಾ ನೇಮಕಾತಿಗೆ ಭಾರತೀಯ ಸೇನೆ ಸಜ್ಜಾಗಿದೆ. ಆಗಸ್ಟ್ 10 ರಂದು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿಪಥ್ ನೇಮಕಾತಿ ನಡೆಯಲಿದೆ.
ಆಗಸ್ಟ್ 10 ರಂದು ಹಾಸನದಲ್ಲಿ ಅಗ್ನಿಪಥ ಸೇನಾ ನೇಮಕಾತಿ ನಡೆಯಲಿದೆ. ಇದಕ್ಕಾಗಿ ಕರ್ನಾಟದ 14 ಜಿಲ್ಲೆಗಳ ಆಸಕ್ತರಿಗೆ ಆನ್ಲೈನ್ ಮೂಲಕ ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜುಲೈ 1 ರಿಂದ ಆನ್ಲೈನ್ ರಿಜಿಸ್ಟ್ರೇಶನ್ ಆರಂಭಗೊಂಡಿದೆ.
ಇನ್ನು ಆಗಸ್ಟ್ 1 ರಿಂದ ಆಗಸ್ಟ್ 7ರ ಒಳಗೆ ನೇಮಕಾತಿಗೆ ಪಾಲ್ಗೊಳ್ಳಲು ಅಡ್ಮಿಷನ್ ಕಾರ್ಡ್ ಕಳುಹಿಸಲಾಗುತ್ತದೆ. ಇ ಮೇಲ್ ಮೂಲಕ ಈ ಕಾರ್ಡ್ ಕಳುಹಿಸಲಾಗುತ್ತಿದೆ. ಅರ್ಜಿ ಸೇರಿದಂತೆ ಆರಂಭಿಕ ಎಲ್ಲಾ ಪ್ರಕ್ರಿಯೆಗಳು ಆನ್ಲೈನ್ ಮೂಲಕವೇ ಇರಲಿದೆ.
ಅಗ್ನಿವೀರ್ ಟೆಕ್ನಕಲ್, 10ನೇ ತರಗತಿ ಪಾಸ್ ಆದವರಿಗೆ ಅಗ್ನಿವೀರ್ ಟ್ರೇಡ್ಸಮನ್, 8ನೇ ತರಗತಿ ಪಾಸ್ ಆದವರಿಗೆ ಅಗ್ನಿವೀರ್ ಟ್ರೇಡ್ಸ್ಮನ್, ಅಗ್ನಿವೀರ್ ಕ್ಲರ್ಕ್, ಅಗ್ನಿವೀರ್ ಸ್ಟೋರ್ ಕೀಪರ್ಸ್, ಅಗ್ನವೀರ್ ಟೆಕ್ನಿಕಲ್ ಕೆಟಗರಿ ಹುದ್ದಿಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸುವವರ ವಯಸ್ಸು ಹಾಗೂ ಇತರ ಮಾನದಂಡಗಳ ಕುರಿತು ಈಗಾಗಲೇ ಸೇನಾ ನೋಟಿಫೀಕೇಶನ್ನಲ್ಲಿ ಹೇಳಿದೆ.