ಈ ವರ್ಷ ಅದಾನಿ ಆದಾಯ ದಿನವೊಂದಕ್ಕೆ 1000 ಕೋಟಿ

Webdunia
ಶುಕ್ರವಾರ, 1 ಅಕ್ಟೋಬರ್ 2021 (09:20 IST)
ಮುಂಬೈ : ಈ ವರ್ಷ ಭಾರತ 179 ಮಂದಿ ಸೂಪರ್ ರಿಚ್ ವ್ಯಾಪ್ತಿಗೆ ಬಂದಿದ್ದು, ಅದಾನಿ ಸಮೂಹದ ಗೌತಮ್ ಅದಾನಿ ವಾರ್ಷಿಕ 3,65700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಥವಾ ದಿನವೊಂದಕ್ಕೆ 1,000 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸಿದ್ದಾರೆ.

ಭಾರತದಲ್ಲಿನ ಸೂಪರ್ ರಿಚ್ ಗಳ ಸಂಖ್ಯೆ 1,000 ನ್ನು ದಾಟಿದೆ ಎಂದು ಸೆ.30 ರಂದು ಪ್ರಕಟಗೊಂಡ ಹುರುನ್ ಇಂಡಿಯಾ-ಐಐಎಫ್ಎಲ್ ಶ್ರೀಮಂತ ಪಟ್ಟಿ ಮೂಲಕ ತಿಳಿದುಬಂದಿದೆ.
ಭೌಗೋಳಿಕವಾಗಿ ಐದು ನಗರಗಳು ಸೂಪರ್ ರಿಚ್ ಗಳ ವಾಸಸ್ಥಾನಕ್ಕೆ ಸೇರ್ಪಡೆಯಾಗಿದ್ದು, ಸೂಪರ್ ರಿಚ್ ನಗರಳ ಸಂಖ್ಯೆ 119 ಕ್ಕೆ ಏರಿಕೆಯಾಗಿದೆ ಹಾಗೂ ಈ 1007 ವ್ಯಕ್ತಿಗಳು 2021 ರಲ್ಲಿ ಶೇ.51 ರಷ್ಟು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ.
ಈ ವರ್ಷ ಕೊರೋನಾ ಸಾಂಕ್ರಾಮಿಕದ ಅಂಗವಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದರೆ ಇತ್ತ ಸರಾಸರಿ ಶೇ.25 ರಷ್ಟು ಸಂಪತ್ತು ಏರಿಕೆಯಾಗಿದೆ. ಹುರುನ್ ಇಂಡಿಯಾ-ಐಐಎಫ್ಎಲ್ ವರದಿಯ ಪ್ರಕಾರ, 1,007 ರ ಮಂದಿಯ ಪೈಕಿ 13 ಮಂದಿ 1,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪತ್ತು ಹೊಂದಿರುವ ದೇಶದಲ್ಲಿ 1 ಲಕ್ಷ ಕೋಟಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದು,
ಮುಖೇಶ್ ಅಂಬಾನಿ 7,18,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಸತತ 10ನೇ ವರ್ಷವೂ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದು 2020 ರಲ್ಲಿ ಶೇ.9 ರಷ್ಟು ಮಾತ್ರ ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿ ಅದಾನಿ ಕುಟುಂಬ ಇದ್ದು 5,05,900 ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದು, 1,40,200 ಕೋಟಿ ರೂಪಾಯಿಗಳಿಂದ ಶೇ.261 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಅದಾನಿ ಏಷ್ಯಾದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಮೂರನೇ ಸ್ಥಾನದಲ್ಲಿ ಹೆಚ್ ಸಿಎಲ್ ನ ಶಿವ್ ನಾದರ್ ಹಾಗೂ ಕುಟುಂಬದವರಿದ್ದು 2,36,600 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು ಶೇ.67 ರಷ್ಟು ಏರಿಕೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ನಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ 11 ಯೋಧರು ಸೇರಿ 30 ಮಂದಿ ಸಾವು

ಕಮಲದ ವಿನ್ಯಾಸದಲ್ಲಿ ತಯಾರಾದ ಮುಂಬೈನ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ

134 ದಿನಗಳ ಹೋರಾಡಿಯೂ ಮಗಳ ಬಿಟ್ಟು ಹೊರಟೇ ಹೋದ ಅಪೂರ್ವ: ಮನಕಲಕುವ ಘಟನೆ

ಬಿಗ್‌ಬಾಸ್‌ ಮನೆಗೆ ಬೀಗ ಹಾಕಿದ ಹಾಗೇ, ಪಿಕ್‌ಪಾಕೆಟ್ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ

ಅಧಿಕೃತ ಸಂವಹನಕ್ಕಾಗಿ zohoಮೇಲ್‌ಗೆ ಬದಲಾಯಿಸಿಕೊಂಡ ಅಮಿತ್‌ ಶಾ

ಮುಂದಿನ ಸುದ್ದಿ
Show comments