Select Your Language

Notifications

webdunia
webdunia
webdunia
webdunia

ಕೇಂದ್ರವು ಗುಜರಾತ್ಗೆ ನೀಡಿದ ನೇರ ಹಣದ ಪ್ರಮಾಣ ಶೇ.350ರಷ್ಟು ಏರಿಕೆ

ಕೇಂದ್ರವು ಗುಜರಾತ್ಗೆ ನೀಡಿದ ನೇರ ಹಣದ ಪ್ರಮಾಣ ಶೇ.350ರಷ್ಟು ಏರಿಕೆ
ಅಹಮದಾಬಾದ್ , ಗುರುವಾರ, 30 ಸೆಪ್ಟಂಬರ್ 2021 (11:39 IST)
ಅಹಮದಾಬಾದ್, ಸೆ 30 : ಕೇಂದ್ರದಿಂದ ಗುಜರಾತ್ ಸರ್ಕಾರಕ್ಕೆ ನೇರವಾಗಿ ಪಾವತಿಯಾಗಿರುವ ಹಣವು 2015ರಿಂದ ಈಚೆಗೆ ಶೇ.350ರಷ್ಟು ಹೆಚ್ಚಳವಾಗಿದೆ.

2015-16ರ ಆರ್ಥಿಕ ವರ್ಷದಲ್ಲಿ 2542 ಕೋಟಿಗಳಿದ್ದಿದ್ದು 2019-20ರ ವೇಳೆಗೆ ಸುಮಾರು 11,659 ಕೋಟಿ ಆಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಗುಜರಾತ್ನ ವಿಧಾನಸಭೆಯಲ್ಲಿ ಸಿಎಜಿ ವರದಿಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಖಾಸಗಿ ವಲಯಕ್ಕೆ ನೀಡಿರುವ 832 ಕೋಟಿ ರೂ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ 17 ಕೋಟಿ ರೂ., ಟ್ರಸ್ಟ್ಗಳಿಗೆ ನೀಡಿರುವ 79 ಕೋಟಿ ರೂ., ಎನ್ಜಿಒಗಳಿಗೆ ನೀಡಿರುವ 18.35ಕೋಟಿ ರೂ.ಹಾಗೂ ವೈಯಕ್ತಿಕವಾಗಿ ನೀಡಿರುವ 1.56 ಕೋಟಿ ಕೂಡ ಸೇರಿದೆ.
ಕೇಂದ್ರ ಸರ್ಕಾರವು ಗುಜರಾತ್ಗೆ ನೀಡಿರುವ ಹಣದಲ್ಲಿ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂ. ನೀಡುವಂತಹ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕೂಡ ಸೇರಿದೆ. ಇದು 3333 ಕೋಟಿ ರೂ. ಆಗಿದೆ. ಹಾಗೆಯೇ ಗುಜರಾತ್ನ ಮೆಟ್ರೋ ಲಿಂಕ್ ಎಕ್ಸ್ಪ್ರೆಸ್ ಯೋಜನೆಗೆ 1667 ಕೋಟಿ ರೂ.ವನ್ನು ನೀಡಲಾಗಿದೆ.
ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾಗಿದೆ. ಸಂಸದರ ನಿಧಿಗಾಗಿ ಹಣ ನೀಡಲಾಗಿದೆ, 97 ಕೋಟಿ ರೂ.ವನ್ನು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗೆ ನೀಡಲಾಗಿದೆ.
ಇದರ ಹೊರತಾಗಿ ರಾಜ್ಯ ಸರ್ಕಾರದ ಸಂಸ್ಥೆಗಳಿಗೆ 3406 ಕೋಟಿ ರೂ. ನೀಡಿದ್ದರೆ, ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ 3389 ಕೋಟಿ ರೂ. ನೀಡಲಾಗಿದೆ. ಮತ್ತು ಗುಜರಾತ್ನಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ 1826 ಕೋಟಿ ರೂ. ನೀಡಲಾಗಿದೆ. ಮತ್ತು ಗುಜರಾತ್ನಲ್ಲಿರುವ ಸ್ವಾಯತ್ತ ಸಂಸ್ಥೆಗಳಿಗೆ 1069 ಕೋಟಿಯನ್ನು ವರ್ಗಾಯಿಸಲಾಗಿದೆ.
ಪ್ರೊ. ವೈಕೆ ಅಲಘ್ ಮಾತನಾಡಿ, ಒಂದು ರಾಜ್ಯದಲ್ಲಿ ಕೇಂದ್ರ ಯೋಜನೆ ಜಾರಿಗೊಳಿಸುವ ಹಕ್ಕು ಕೇಂದ್ರಕ್ಕೆ ಇದೆ, ಆದಾಗ್ಯೂ ಮೆಟ್ರೋದಂತಹ ವಾಣಿಜ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಪರ ವಿರುದ್ಧ ವಾದಗಳಿವೆ. ನೇರ ಹಣ ವರ್ಗಾವಣೆ ಗಂಭೀರ ಸಮಸ್ಯೆಯಾಗಿದ್ದು, ಕೆಲವು ಮಾನದಂಡಗಳ ಆಧಾರದ ಮೇಲೆ ಹಣವನ್ನು ಹಂಚಲಾಗುತ್ತದೆ, ಆ ಅರ್ಹತೆಯನ್ನು ಹೊಂದಿರದ ಸಂಸ್ಥೆಗಳು ವಂಚಿತವಾಗುತ್ತವೆ'.


Share this Story:

Follow Webdunia kannada

ಮುಂದಿನ ಸುದ್ದಿ

ಕರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ರೇಬೀಸ್ ಇಂಜೆಕ್ಷನ್ ಕೊಟ್ಟ ವೈದ್ಯರು!