Select Your Language

Notifications

webdunia
webdunia
webdunia
webdunia

ಸೇಡು ತೀರಿಸಿಕೊಳ್ಳಲು ಮಹಿಳೆಯರ ಮೇಲೆ ಆ್ಯಸಿಡ್ ದಾಳಿ !?

ಅತ್ಯಾಚಾರ
ಗಾಂಧಿನಗರ : ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಇಬ್ಬರು ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ತಂದೆ, ಮಗನ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಭಾನುವಾರ ರಾತ್ರಿ 27 ಮತ್ತು 37 ವರ್ಷದ ಇಬ್ಬರು ಮಹಿಳೆಯರು ಆಸ್ಪತ್ರೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಮ್ರೇಲಿಯ ಸಾವರಕುಂಡ್ಲಾ ಪಟ್ಟಣದಲ್ಲಿ ಇಬ್ಬರು ವ್ಯಕ್ತಿಗಳು ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆ್ಯಸಿಡ್ ದಾಳಿ ನಂತರ ಸಂತ್ರಸ್ತರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪೊಲೀಸರು ಅವರ ಹೇಳಿಕೆಗಳನ್ನು ಪಡೆದಿದ್ದಾರೆ.

ಬಳಿಕ ಆರೋಪಿಗಳು ತಮ್ಮ ನೆರೆಹೊರೆಯಲ್ಲಿ ವಾಸಿಸುವವರು ಎಂದು ಸಂತ್ರಸ್ತೆಯರು ತಿಳಿಸಿದ ಬಳಿಕ ತಂದೆ-ಮಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಕಾಲೇಜ್ ಬಂದ್ ಮಾಡಿ ಆನ್ಲೈನ್ ಶಿಕ್ಷಣ ನೀಡಿ - ಸಿದ್ದರಾಮಯ್ಯ